ADVERTISEMENT

ಭದ್ರತಾ ಸಿಬ್ಬಂದಿ ನೆರವು

​ಪ್ರಜಾವಾಣಿ ವಾರ್ತೆ
Published 12 ಮೇ 2018, 19:32 IST
Last Updated 12 ಮೇ 2018, 19:32 IST
ವೃದ್ಧೆಯೊಬ್ಬರನ್ನು ವ್ಹೀಲ್‌ಚೇರ್‌ನಲ್ಲಿ ಮತಗಟ್ಟೆಗೆ ಕರೆದೊಯ್ದ ಭದ್ರತಾ ಸಿಬ್ಬಂದಿ
ವೃದ್ಧೆಯೊಬ್ಬರನ್ನು ವ್ಹೀಲ್‌ಚೇರ್‌ನಲ್ಲಿ ಮತಗಟ್ಟೆಗೆ ಕರೆದೊಯ್ದ ಭದ್ರತಾ ಸಿಬ್ಬಂದಿ   

ಬೆಂಗಳೂರು: ಚುನಾವಣೆ ವೇಳೆ ಮತ ಚಲಾಯಿಸಲು ಬಂದ ಮತದಾರರಿಗೆ ಭದ್ರತಾ ಪಡೆಗಳ ಸಿಬ್ಬಂದಿ ನೆರವಾದರು.

ಹಿರಿಯ ನಾಗರಿಕರು ಹಾಗೂ ಅಂಗವಿಕಲ ಅಭ್ಯರ್ಥಿಗಳನ್ನು ಮತಗಟ್ಟೆಗೆ ಕರೆದೊಯ್ಯಲು ಮತ್ತು ಅವರನ್ನು ವಾಪಸ್‌ ಮನೆಗೆ ಕಳುಹಿಸುವುದಕ್ಕಾಗಿ ಸುಮಾರು 2,000 ಪೌರರಕ್ಷಕ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಜತೆಗೆ, ಮತಗಟ್ಟೆಗಳಲ್ಲಿ ವ್ಹೀಲ್‌ಚೇರ್‌ಗಳ ವ್ಯವಸ್ಥೆ ಮಾಡಲಾಗಿತ್ತು.

ಬೆಂಗಳೂರು, ರಾಮನಗರ, ತುಮಕೂರು, ಶಿರಾ, ಮಧುಗಿರಿ, ಪಾವಗಡ, ಮೈಸೂರಿನ ಮತಗಟ್ಟೆ ಬಳಿ ಅವರೆಲ್ಲ ಕರ್ತವ್ಯ ಮಾಡಿದರು.

ADVERTISEMENT

ಮಗು ಎತ್ತಿಕೊಂಡ ಕಾನ್‌ಸ್ಟೆಬಲ್: ಕೆ.ಆರ್‌.ಪುರದ ಮತಗಟ್ಟೆಗೆ ಮಹಿಳೆಯೊಬ್ಬರು 5 ತಿಂಗಳ ಮಗುವಿನ ಸಮೇತ ಬಂದಿದ್ದರು. ಅದು ಅಳಲಾರಂಭಿಸಿದ್ದರಿಂದ ಸರದಿಯಲ್ಲಿ ನಿಲ್ಲಲು ತೊಂದರೆ ಆಯಿತು.

ಆಗ ಮಗುವನ್ನು ಎತ್ತಿಕೊಂಡ ಕಾನ್‌ಸ್ಟೆಬಲ್‌, ಮತದಾನ ಮಾಡಲು ಮಹಿಳೆಯನ್ನು ಕಳುಹಿಸಿಕೊಟ್ಟರು. ಐದು ನಿಮಿಷಗಳವರೆಗೆ ಕಾನ್‌ಸ್ಟೆಬಲ್‌ ಮಗುವನ್ನು ಆಟವಾಡಿಸುತ್ತಿದ್ದರು. . ಕಾನ್‌ಸ್ಟೆಬಲ್‌ ಕೆಲಸಕ್ಕೆ ಮತದಾರರು ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.