ADVERTISEMENT

ಮದುವೆ ದಿರಿಸಿನಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

​ಪ್ರಜಾವಾಣಿ ವಾರ್ತೆ
Published 12 ಮೇ 2018, 7:22 IST
Last Updated 12 ಮೇ 2018, 7:22 IST
ಮದುವೆ ದಿರಿಸಿನಲ್ಲೇ ಮತಗಟ್ಟೆಗೆ ಬಂದು  ಮತ ಚಲಾಯಿಸಿದ ವಧು
ಮದುವೆ ದಿರಿಸಿನಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು   

ಮಂಗಳೂರು: ಶನಿವಾರ ಬೆಳಿಗ್ಗೆ ವಿವಾಹವಾದ ನಗರದ ಬೊಂದೇಲ್ ‌ನಿವಾಸಿ ವಾಯ್ಲಾ ಮರಿಯಾ ಫರ್ನಾಂಡಿಸ್ ಮದುವೆ ಮುನ್ನ ಮತ ಚಲಾಯಿಸಿದರು.

ಮದುವೆಯ ದಿರಿಸಿನಲ್ಲೇ ಬೊಂದೇಲ್ನ ಸೇಂಟ್ ಲಾರೆನ್ಸ್ ಇಂಗ್ಲಿಷ್ ಮಾಧ್ಯಮ ಶಾಲೆಯ ಮತಗಟ್ಟೆಗೆ ಬಂದು ಮತ ಚಲಾಯಿಸಿದರು. ಬೆಳಿಗ್ಗೆ 10.30ಕ್ಕೆ ಬೆಳ್ತಂಗಡಿಯಲ್ಲಿ ಸಿಲೆಸ್ಟರ್ ರೋಡ್ರಿಗಸ್ ಎಂಬುವವರನ್ನು ವಿವಾಹವಾದರು.

ಕೊಂಕಣಿ ಭಾಷಿಕ ಮುಂದಾಳು ಸ್ಟೇನ್ಲಿ ಅಲ್ವಾರಿಸ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಈ ವಿಷಯ ಹಂಚಿಕೊಂಡಿದ್ದಾರೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.