ADVERTISEMENT

‘ಸರ್ಕಾರ ರಚಿಸಲು ನಾವೂ ಅವಕಾಶ ಕೇಳ್ತೀವಿ’

​ಪ್ರಜಾವಾಣಿ ವಾರ್ತೆ
Published 15 ಮೇ 2018, 12:40 IST
Last Updated 15 ಮೇ 2018, 12:40 IST
‘ಸರ್ಕಾರ ರಚಿಸಲು ನಾವೂ ಅವಕಾಶ ಕೇಳ್ತೀವಿ’
‘ಸರ್ಕಾರ ರಚಿಸಲು ನಾವೂ ಅವಕಾಶ ಕೇಳ್ತೀವಿ’   

ಬೆಂಗಳೂರು: ‘ಇದು ಹೊಲಸು ರಾಜಕೀಯ. ಇದೆಂಥ ಮೈತ್ರಿ. ನಾವು ಖಂಡಿಸುತ್ತೇವೆ’

ಇದು ಯಡಿಯೂರಪ್ಪ ಅವರ ಖಡಕ್ ಮಾತು.

ವಿಧಾನಸಭೆ ಚುನಾವಣೆ ಫಲಿತಾಂಶದ ಚಿತ್ರಣ ಸ್ಪಷ್ಟವಾಗುತ್ತಿರುವ ಹೊತ್ತಿನಲ್ಲಿ ಕಾಂಗ್ರೆಸ್ ಪಕ್ಷವು ಜೆಡಿಎಸ್‌ನ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲು ಸಮ್ಮತಿಸಿದ ಸುದ್ದಿ ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ನಗರದ ಬಿಜೆಪಿ ಕಚೇರಿಯಲ್ಲಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಸುದ್ದಿಗೋಷ್ಠಿ ನಡೆಸಿದರು.

ADVERTISEMENT

‘ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿಯಿಂದ ಸರ್ಕಾರ ರಚಿಸುವುದು ಸರಿಯಲ್ಲ. ಇದು ಹೊಲಸು ರಾಜಕೀಯ. ಇದನ್ನು ನಾವು ಖಂಡಿಸುತ್ತೇವೆ. ಕಾಂಗ್ರೆಸ್ ವಿರೋಧಿ ಮತಗಳು ನಿರ್ಣಾಯಕವಾಗಿ ಜೆಡಿಎಸ್‌ಗೆ ಹೋಗಿವೆ. ಜನರ ಆರ್ಶೀವಾದದಿಂದ ಬಿಜೆಪಿ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಆರಿಸಿ ಬಂದಿದ್ದಾರೆ’ ಎನ್ನುವುದು ಅವರ ಖಚಿತ ನುಡಿ.

‘ಬಿಜೆಪಿ ಶಾಸಕರು ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದಾರೆ. ಸರ್ಕಾರ ರಚನೆಗೆ ಅವಕಾಶ ಕೋರಿ ನಾವು ರಾಜ್ಯಪಾಲರ ಭೇಟಿಗೆ ಹೋಗುತ್ತಿದ್ದೇವೆ. ಜನಾದೇಶ ನಮ್ಮ ಪರವಾಗಿದೆ. ಹಿಂಬಾಗಿಲ ಮೂಲಕ ಅಧಿಕಾರ ಹಿಡಿಯುವುದನ್ನು ಖಂಡಿಸುತ್ತೇವೆ’ ಎಂದು ಅವರು ಘೋಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.