ADVERTISEMENT

ಹೊಣೆಗಾರಿಕೆ ಅರಿಯಿರಿ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2018, 19:40 IST
Last Updated 10 ಏಪ್ರಿಲ್ 2018, 19:40 IST
ಹೊಣೆಗಾರಿಕೆ ಅರಿಯಿರಿ
ಹೊಣೆಗಾರಿಕೆ ಅರಿಯಿರಿ   

ಪ್ರಜಾಪ್ರಭುತ್ವ ಬಂದ ಮೇಲೆ ದೇಶದ ಹೊಣೆಗಾರಿಕೆ ಪ್ರಜೆಗಳಿಗೆ ವರ್ಗಾವಣೆಯಾಗಿದೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ಯೋಗ್ಯ ವ್ಯಕ್ತಿ
ಯನ್ನು ತಮ್ಮ ಜನಪ್ರತಿನಿಧಿಯನ್ನಾಗಿ ಆರಿಸಲು ಮತದಾನ ಮಾಡುವುದು ಅವಶ್ಯ. ಹೊಣೆಗಾರಿಕೆ ನಿರ್ವಹಿಸದೇ ಹೋದರೆ ಕರ್ತವ್ಯಭ್ರಷ್ಟರಾದಂತೆ. ಆದ್ದರಿಂದ ಹೊಣೆಗಾರಿಕೆಯನ್ನು ಅರಿತು ಚುನಾವಣೆಯಲ್ಲಿ ವೋಟ್ ಹಾಕಿ ಯೋಗ್ಯರನ್ನು ಆರಿಸಬೇಕು. ಯಾರು ಸೂಕ್ತ ಎನಿಸುವರೋ ಅವರಿಗೆ ಮತ ಚಲಾಯಿಸಬಹುದು. ನಾನು ಸಹ ಪ್ರತಿ ಚುನಾವಣೆಯಲ್ಲೂ ತಪ್ಪದೇ ಮತದಾನ ಮಾಡುತ್ತಿದ್ದೇನೆ. ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿಯೂ ಮತದಾನ ಮಾಡುತ್ತೇನೆ, ಎಲ್ಲ ಮತದಾರರೂ ತಪ್ಪದೇ ಮತದಾನ ಮಾಡಬೇಕು.

–ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT