ADVERTISEMENT

‘ಮೋದಿಗೆ ಪ್ರಧಾನಿಯಾಗಿ ಉಳಿಯುವ ಅರ್ಹತೆ ಇಲ್ಲ’

ಮೋದಿ ಹೇಳಿಕೆಗೆ ಸಿಎಂ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2018, 19:54 IST
Last Updated 20 ಫೆಬ್ರುವರಿ 2018, 19:54 IST
‘ಮೋದಿಗೆ ಪ್ರಧಾನಿಯಾಗಿ ಉಳಿಯುವ ಅರ್ಹತೆ ಇಲ್ಲ’
‘ಮೋದಿಗೆ ಪ್ರಧಾನಿಯಾಗಿ ಉಳಿಯುವ ಅರ್ಹತೆ ಇಲ್ಲ’   

ಬೆಂಗಳೂರು: ’ಸುಳ್ಳು ಆರೋಪಗಳನ್ನು ಮಾಡುತ್ತಲೇ ಓಡಾಡುವ ನರೇಂದ್ರ ಮೋದಿಗೆ ಪ್ರಧಾನಿ ಹುದ್ದೆಯಲ್ಲಿ ಮುಂದುವರಿಯುವ ನೈತಿಕ ಅರ್ಹತೆ ಇಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರಿನಲ್ಲಿ ಪ್ರಧಾನಿ ಮಾಡಿದ್ದ ಟೀಕೆಗೆ ತಿರುಗೇಟು ಕೊಟ್ಟಿರುವ ಅವರು, ‘9 ವರ್ಷ ಗುಜರಾತ್‍ನಲ್ಲಿ ಮಾಡಬಾರದ್ದನ್ನು ಮಾಡಿದ ಅವರು ಈಗ ನಮಗೆ ಪಾಠ ಹೇಳುತ್ತಿದ್ದಾರೆ. ಮೋದಿ ಮುಖ್ಯಮಂತ್ರಿಯಾಗಿದ್ದಾಗ ಲೋಕಾಯುಕ್ತರನ್ನು ನೇಮಕ ಮಾಡಿರಲಿಲ್ಲ. ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡುವವರೂ ಅವರೇ’ ಎಂದು ಹೇಳಿಕೆಯಲ್ಲಿ ಹರಿಹಾಯ್ದಿದ್ದಾರೆ.

‘ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ₹11,000 ಕೋಟಿ ಜೊತೆ ನೀರವ್ ಮೋದಿ ಪರಾರಿಯಾಗಿದ್ದಾರೆ. ನಾನಾಗಿದ್ದರೆ ನೀರವ್‌ ಮೋದಿಯನ್ನು ಹಾಗೆಯೇ ಬಿಡುತ್ತಿರಲಿಲ್ಲ. ಮೋದಿ ಕುಮ್ಮಕ್ಕು ಅಥವಾ ಅನುಮತಿ ಇಲ್ಲದೇ ನೀರವ್‌ ಪರಾರಿಯಾಗಲು ಹೇಗೆ ಸಾಧ್ಯ’ ಎಂದೂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ADVERTISEMENT

ಲಂಚ ಪಡೆದು ಜೈಲಿಗೆ ಹೋಗಿ ಬಂದಿರುವ ಯಡಿಯೂರಪ್ಪ ಅವರನ್ನು ಪಕ್ಕದಲ್ಲಿ ಕೂರಿಸಿಕೊಂಡು ಕಮಿಷನ್ ಬಗ್ಗೆ ಮೋದಿಯವರು ಮಾತನಾಡುತ್ತಾರೆ. ಇದಕ್ಕೆ ಏನು ಹೇಳಬೇಕು? ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ನೂರಕ್ಕೆ ನೂರರಷ್ಟು ಕಮಿಷನ್ ವ್ಯವಹಾರ ನಡೆ
ಯುತ್ತಿತ್ತು. ಹೀಗಾಗಿಯೇ ಯಡಿಯೂರಪ್ಪ ಸೇರಿ ಐದಾರು ಮಂದಿ ಜೈಲಿಗೆ ಹೋಗಿ ಬಂದರು ಎಂದೂ ಅವರು ಕುಟುಕಿದ್ದಾರೆ.

ದೇಶ, ರಾಜ್ಯದ ಯಾವುದೇ ಸಮಸ್ಯೆ ಕುರಿತು ಪ್ರಧಾನಿ ಮಾತನಾಡಲಿಲ್ಲ, ಮಾತನಾಡಲು ಅವರಲ್ಲಿ ವಿಷಯವೂ ಇಲ್ಲ. ಪ್ರಧಾನಿಯಂತೆ ಮಾತನಾಡದೇ ಕ್ಷುಲ್ಲಕ ರಾಜಕಾರಣ ಮಾಡಿದ್ದಾರೆ ಎಂದು ಅವರು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.