ADVERTISEMENT

ಟ್ವಿಟ್ವಾದ: ಸಿದ್ದರಾಮಯ್ಯ, ಪ್ರತಾಪ್ ಸಿಂಹ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2018, 20:02 IST
Last Updated 20 ಫೆಬ್ರುವರಿ 2018, 20:02 IST
ಟ್ವಿಟ್ವಾದ: ಸಿದ್ದರಾಮಯ್ಯ, ಪ್ರತಾಪ್ ಸಿಂಹ
ಟ್ವಿಟ್ವಾದ: ಸಿದ್ದರಾಮಯ್ಯ, ಪ್ರತಾಪ್ ಸಿಂಹ   

ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರೇ, ನೀವು ಕಮಿಷನ್‌ ಬಗ್ಗೆ ಮಾತನಾಡುವುದಕ್ಕೆ ಹೆಚ್ಚು ಇಷ್ಟಪಡುತ್ತಿರುವುದರಿಂದ ನಿಮಗೆ ಈ ಪ್ರಶ್ನೆ ಕೇಳುತ್ತೇನೆ– ತಮ್ಮ ಹಣವನ್ನು ಖಾತೆಗಳಿಗೆ ಜಮೆ ಮಾಡುವುದಕ್ಕಾಗಿ ಸಾಮಾನ್ಯ ಜನರು ಬ್ಯಾಂಕುಗಳ ಮುಂದೆ ಸರತಿ ಸಾಲಲ್ಲಿ ನಿಲ್ಲುವಂತೆ ಮಾಡಿದಿರಿ. ನಂತರ ಜನರ ₹12 ಸಾವಿರ ಕೋಟಿ ಹಣದೊಂದಿಗೆ ದೇಶದಿಂದ ಪಲಾಯನ ಮಾಡಲು ನೀರವ್‌ ಮೋದಿ‌ಗೆ ಅವಕಾಶ ಕೊಟ್ಬಿರಿ. ಅದು ಎಷ್ಟು ಪರ್ಸೆಂಟ್‌ ಜನರ ಹಣ?

ಸಿದ್ದರಾಮಯ್ಯ, ಮುಖ್ಯಮಂತ್ರಿ

ಅಯ್ಯೋ... ಸಿದ್ದರಾಮಯ್ಯನವರೇ, ಬ್ಯಾಂಕುಗಳಲ್ಲಿ ₹52 ಲಕ್ಷ ಕೋಟಿ NPA (ವಸೂಲಾಗದ ಸಾಲ) ಆಗಿದ್ದು ನಿಮ್ಮ ಅಧಿನಾಯಕಿ ಕಾಲದಲ್ಲಿ ಹಾಗೂ ಬಹಳಷ್ಟು ಕಳ್ಳರೆಲ್ಲ ಆಕೆಯ ಅಳಿಯ ವಾದ್ರಾ ಜೊತೆ ಪಾರ್ಟಿ ಮಾಡಿಕೊಂಡು ಆರಾಮಾಗಿಯೇ ಇದ್ದರು. ಕಳ್ಳರೆಲ್ಲ ಇನ್ನು ಉಳಿಗಾಲವಿಲ್ಲ ಅಂತ ದೇಶ ಬಿಟ್ಟು ಓಡಿಹೋಗುತ್ತಿರುವುದು ಮೋದಿ ಕಾಲದಲ್ಲಿ.

ADVERTISEMENT

ಪ್ರತಾಪ್‌ ಸಿಂಹ, ಬಿಜೆಪಿ ಸಂಸದ

***

ಕಳ್ಳರು ದೇಶದಲ್ಲಿದ್ದರೂ ಕಾಂಗ್ರೆಸ್ ಕಾರಣ! ದೇಶ ಬಿಟ್ಟು ತಪ್ಪಿಸಿಕೊಂಡರೂ ಕಾಂಗ್ರೆಸ್ ಕಾರಣ! ಹಾಗಾದರೆ ಬಿಜೆಪಿಗೆ ವೋಟ್ ಹಾಕಿದ್ದು ಕಳ್ಳರನ್ನ ಎಣಿಸೋಕಾ?

ಆನಂದಪ್ಪ, ಎಂಜಿನಿಯರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.