ADVERTISEMENT

ಚೆಕ್‌ಪೋಸ್ಟ್‌ನಲ್ಲಿ ಅಧಿಕಾರಿಗಳಿಗೆ ಶಾಕ್‌ !

ಯಕ್ಷಗಾನ ಕಲಾವಿದ ನೀಲ್ಕೊಡು ಶಂಕರ ಹೆಗಡೆ ಅವರ ವೇಷ ನೋಡಿ ಹೌಹಾರಿದರು

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2019, 6:54 IST
Last Updated 9 ಏಪ್ರಿಲ್ 2019, 6:54 IST
ಸ್ತ್ರೀವೇಷಧಾರಿಯಾಗಿ ನೀಲ್ಕೊಡು ಶಂಕರ ಹೆಗಡೆ 
ಸ್ತ್ರೀವೇಷಧಾರಿಯಾಗಿ ನೀಲ್ಕೊಡು ಶಂಕರ ಹೆಗಡೆ    

ಉಡುಪಿ: ಖ್ಯಾತ ಯಕ್ಷಗಾನ ಕಲಾವಿದ ನೀಲ್ಕೋಡು ಶಂಕರ ಹೆಗಡೆ ಅವರು ಸ್ತ್ರೀವೇಷಧಾರಿಯಾಗಿ ಕಾರು ಚಲಾಯಿಸುತ್ತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸುದ್ದಿಯಾಗಿದೆ.‌

ಸ್ತ್ರೀವೇಷಧಾರಿಯಾಗಿ ಕಾರಿನಲ್ಲಿ ಹೋಗಬೇಕಾದ ಅನಿವಾರ್ಯತೆ ಹಾಗೂ ದಾರಿ ಮಧ್ಯೆಯ ಅನುಭವಗಳನ್ನು ನೀಲ್ಕೋಡು ಶಂಕರ ಹೆಗಡೆ ಅವರು ‘ಪ್ರಜಾವಾಣಿ’ ಜತೆ ಹಂಚಿಕೊಂಡರು.

‘ಯುಗಾದಿ ಹಬ್ಬದ ರಾತ್ರಿ ಗುಡೆಯಂಗಡಿಯಲ್ಲಿ ಯಕ್ಷಗಾನ ಪ್ರಸಂಗ ಮುಗಿಸಿ ಅಂಕೋಲದಲ್ಲಿ ಮತ್ತೊಂದು ಆಟಕ್ಕೆ ತೆರಳಬೇಕಿತ್ತು. ಅಲ್ಲಿಯೂ ಸ್ತ್ರೀವೇಷವೇ ಇತ್ತು. ಹಾಗಾಗಿ, ಮೇಕಪ್‌ ಬಿಚ್ಚುತ್ತಾ ಕೂತರೆ ತಡವಾಗುತ್ತದೆ ಎಂದು ಸ್ತ್ರೀವೇಷಧಾರಿಯಾಗಿಯೇ ಕಾರು ಚಲಾಯಿಸಿಕೊಂಡು ಹೊರಟೆ. ಮಾದನಗೆರೆ ಚೆಕ್‌ಪೋಸ್ಟ್‌ ಬಳಿ ಅಧಿಕಾರಿಗಳು ತಪಾಸಣೆಗಾಗಿ ಕಾರು ತಡೆದರು. ನನ್ನ ವೇಷ ನೋಡಿ ಹೌಹಾರಿ, ಅಚ್ಚರಿಪಟ್ಟರು. ಬಳಿಕ ವಿಷಯವನ್ನೆಲ್ಲ ತಿಳಿಸಿದ ಮೇಲೆ ನಿರಾಳರಾಗಿ ಒಂದೆರಡು ಫೋಟೊ ಕ್ಲಿಕ್ಕಿಸಿಕೊಂಡು ಬಿಟ್ಟರು’ ಎಂದು ಶಂಕರ ಹೆಗಡೆ ಅವರು ಹಾಸ್ಯ ಸನ್ನಿವೇಶವನ್ನು ಬಿಚ್ಚಿಟ್ಟರು.

ADVERTISEMENT

ಕಾರಿನೊಳಗೆ ಪತ್ನಿ ತೆಗೆದ ಫೋಟೊವನ್ನು ಫೇಸ್‌ಬುಕ್‌ನಲ್ಲಿ ಹಾಕಿದ್ದೆ. ಫೋಟೊಗೆ ಬಹಳ ಮೆಚ್ಚುಗೆಗಳು ಬಂದಿವೆ ಎಂದು ನಗುತ್ತಲೇ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.