ADVERTISEMENT

2ನೇ ಹಂತದ ಮತದಾನ: 11 ಗಂಟೆಗೆ 12 ರಾಜ್ಯಗಳಲ್ಲಿ ಶೇ 10.85 ರಷ್ಟು ಮತದಾನ 

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2019, 5:55 IST
Last Updated 18 ಏಪ್ರಿಲ್ 2019, 5:55 IST
   

ನವದೆಹಲಿ: 2019ರ ಲೋಕಸಭಾ ಚುನಾವಣೆಯ 2ನೇ ಹಂತದ ಮತದಾನ ಶಾಂತಿಯುತವಾಗಿ ನಡೆಯುತ್ತಿದ್ದು ಬೆಳಗ್ಗೆ 11 ಗಂಟೆಯ ವೇಳೆಗೆ ಶೇ 10 ರಷ್ಟು ಮತದಾನವಾಗಿರುವುದಾಗಿ ಚುನಾವಣಾ ಆಯೋಗ ತಿಳಿಸಿದೆ.

ಈಶಾನ್ಯ ರಾಜ್ಯಗಳು, ತಮಿಳುನಾಡು ಸೇರಿದಂತೆ ರಾಜ್ಯದಲ್ಲಿ ಇಲ್ಲಿಯತನಕ ಯಾವುದೇ ಅಹಿತಕರ ಘಟನೆ ನಡೆದಿರುವ ಬಗ್ಗೆ ವರದಿಯಾಗಿಲ್ಲ. ಸಾರ್ವಜನಿಕರು ಉತ್ಸಾಹದಿಂದ ಮತಗಟ್ಟೆಗಳಿಗೆ ಆಗಮಿಸಿ ಮತದಾನ ಮಾಡುತ್ತಿರುವುದು ಸಾಮಾನ್ಯವಾಗಿತ್ತು.

ಬೆಳಗ್ಗೆ 11 ಗಂಟೆಯ ಸುಮಾರಿಗೆ 12 ರಾಜ್ಯಗಳಲ್ಲಿನ 95 ಲೋಕಸಭಾ ಸ್ಥಾನಗಳಿಗೆ 10.85ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ADVERTISEMENT

ಅಸ್ಸಾಂ–18.23, ಬಿಹಾರ–12.55%, ಛತ್ತೀಸ್‌ಗಡ–14.18%, ಜಮ್ಮು ಮತ್ತು ಕಾಶ್ಮೀರ–5.86, ಕರ್ನಾಟಕ–11.01%,ಮಹಾರಾಷ್ಟ್ರ–7.37, ಮಣಿಪುರ–17.40, ಒಡಿಶಾ–9.01, ತಮಿಳುನಾಡು–9.17, ಉತ್ತರಪ್ರದೇಶ–12.84, ಪಶ್ಚಿಮಬಂಗಾಳ–16.77, ಪುದುಚೇರಿಯಲ್ಲಿ ಶೇ 12.83 ರಷ್ಟು ಮತದಾನವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.