ADVERTISEMENT

ಮೈತ್ರಿ ಮುರಿಯಲು ‘ಹಣದ ಥೈಲಿ’ ಕಾರಣ

ಪಿಟಿಐ
Published 23 ಮಾರ್ಚ್ 2019, 20:26 IST
Last Updated 23 ಮಾರ್ಚ್ 2019, 20:26 IST
   

ಕೋಲ್ಕತ್ತ: ‘ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್‌– ಸಿಪಿಎಂ ನೇತೃತ್ವದ ಎಡಪಕ್ಷಗಳ ಸೀಟು ಹೊಂದಾಣಿಕೆ ಮಾತುಕತೆ ವಿಫಲಗೊಳ್ಳುವಲ್ಲಿ ಹಣದ ಥೈಲಿಗಳು ಪ್ರಮುಖ ಪಾತ್ರ ವಹಿಸಿವೆ’ ಎಂದು ಎಡರಂಗದ ಅಧ್ಯಕ್ಷ ಬಿಮನ್‌ ಬಸು ಆರೋಪಿಸಿದ್ದಾರೆ.

ಇದರಿಂದ ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತು ಎಡಪಕ್ಷಗಳ ಮೈತ್ರಿ ಸಂಭವಿಸುವ ಸಾಧ್ಯತೆ ಇನ್ನಷ್ಟು ಕ್ಷೀಣವಾಗಿದೆ.

ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಬಸು, ‘ ಬಿಜೆಪಿ ವಿರೋಧಿ ಮತ್ತು ತೃಣಮೂಲ ಕಾಂಗ್ರೆಸ್‌ ವಿರೋಧಿ ಶಕ್ತಿಗಳನ್ನು ಒಗ್ಗೂಡಿಸಲು ನಾವು ಗರಿಷ್ಠ ಶ್ರಮ ಹಾಕಿದ್ದೆವು. ಆದರೆ ರಾಜಕೀಯ ವಲಯದಲ್ಲಿ ಹಣದ ಚೀಲಗಳು ಓಡಾಡುತ್ತಿವೆ ಎಂದು ಕೆಲವರು ಹೇಳುತ್ತಿದ್ದಾರೆ. ಬಹಳಷ್ಟು ಹಣದ ಚೀಲಗಳಿರುವವರ ಜೊತೆಗೆ ಮಾತುಕತೆ ನಡೆಸುವುದರಲ್ಲಿ ಅರ್ಥವಿರುವುದಿಲ್ಲ. ಅಂಥ ಕಡೆ ಮಾತುಕತೆ, ಒಪ್ಪಂದಗಳು ಅರ್ಥ ಕಳೆದುಕೊಳ್ಳುತ್ತವೆ’ ಎಂದರು.

ADVERTISEMENT

ಸೀಟು ಹಂಚಿಕೆ ಮಾತುಕತೆ ಮುರಿದು ಬೀಳಲು ಹಣವೊಂದೇ ಕಾರಣವೇ ಎಂಬ ಪ್ರಶ್ನೆಗೆ, ‘ಖಂಡಿತವಾಗಿಯೂ ಹೌದು’ ಎಂಬ ಉತ್ತರವನ್ನು ಅವರು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.