ADVERTISEMENT

ಈ ವಾರ ತೆರೆಗೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2018, 19:30 IST
Last Updated 22 ಮಾರ್ಚ್ 2018, 19:30 IST

ರಾಜರಥ

ಜಾಲಿಹಿಟ್ಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಅಜಯ್ ರೆಡ್ಡಿ, ವಿಶು ಡಾಕಪ್ಪಗಾರಿ, ಅಂಜು ವಲ್ಲಭನೇನಿ ಹಾಗೂ ಸತೀಶ್ ಶಾಸ್ತ್ರಿ ನಿರ್ಮಿಸಿರುವ ‘ರಾಜರಥ’ ಚಿತ್ರ ಈ ವಾರ ತೆರೆ ಕಾಣುತ್ತಿದೆ. 

ಅನೂಪ್ ಭಂಡಾರಿ ಈ ಚಿತ್ರದ ನಿರ್ದೇಶಕ. ವಿಲಿಯಂ ಡೇವಿಡ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ನಿರೂಪ್ ಭಂಡಾರಿ, ಪುನೀತ್ ರಾಜಕುಮಾರ್, ಆವಂತಿಕಾ ಶೆಟ್ಟಿ, ರವಿಶಂಕರ್, ಆರ್ಯ ತಾರಾಬಳಗದಲ್ಲಿದ್ದಾರೆ.

ADVERTISEMENT

ವರ್ತಮಾನ

ಅಲ್ಟಿಮೆಟ್ ಮೂವೀಸ್ ಲಾಂಛನದಲ್ಲಿ ಮನು ಬಿಲ್ಲೆಮನೆ ಹಾಗೂ ಹೇಮಾವತಿ ನಿರ್ಮಿಸಿರುವ ಚಿತ್ರ ‘ವರ್ತಮಾನ’.  ಉಮೇಶ್ ಅಂಶಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಯಾವುದೇ ಹಾಡುಗಳಿಲ್ಲ. ಚಿತ್ರದ ಅವಧಿ ಕೇವಲ ಒಂದು ಗಂಟೆ ಐವತ್ತು ನಿಮಿಷ. ಸಂಚಾರಿ ವಿಜಯ್, ಸಂಜನಾ ಪ್ರಕಾಶ್, ವಾಣಿಶ್ರೀ, ಸ್ವಪ್ನರಾಜ್, ದೀಪಕ್‌ ತಾರಾಗಣದಲ್ಲಿದ್ದಾರೆ. ಗೋವಿಂದರಾಜು ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಸರವಣ ಸಂಗೀತ ನಿರ್ದೇಶನ ನೀಡಿದ್ದಾರೆ.

ಮುಖ್ಯಮಂತ್ರಿ ಕಳದೋದ್ನಪ್ಪೊ

ಆರ್. ಶಿವಕುಮಾರ್ ಭದ್ರಯ್ಯ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಹಾಗೂ ನಿರ್ಮಾಣ ಮಾಡಿರುವ ಚಿತ್ರ ‘ಮುಖ್ಯಮಂತ್ರಿ ಕಳೆದೋದ್ನಪ್ಪೊ’.  ಬಾಬು ಹಿರಣ್ಣಯ್ಯ, ಭರತ್ ಭದ್ರಯ್ಯ, ಅಮೂಲ್ಯಾ ರಾಜ್‌ ತಾರಾಗಣದಲ್ಲಿದ್ದಾರೆ. ವಿ.ಕೆ. ನಯನ್ ಸಂಗೀತ ಸಂಯೋಜಿಸಿದ್ದಾರೆ. ಹರೀಶ್ ಅವರ ಛಾಯಾಗ್ರಹಣವಿದೆ.

ಯೋಗಿ ದುನಿಯಾ

ಬಾಲಾಜಿ ಸಿನಿಮಾಸ್ ಮತ್ತು ಮೈ ಫಿಲಂ ಫ್ಯಾಕ್ಟರಿ ಲಾಂಛನದಲ್ಲಿ ಮಹೇಶ್ ಸಿದ್ದರಾಜು, ವೆಂಕಟೇಶ್ ಬಾಬು, ಚಂದ್ರಶೇಖರ್ ಪಾಟೀಲ್ ಮತ್ತು ನಾರಾಯಣಮೂರ್ತಿ ‘ಯೋಗಿ ದುನಿಯಾ’ ಸಿನಿಮಾ ನಿರ್ಮಿಸಿದ್ದಾರೆ.  ಹರಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಭರತ್ ಬಿ.ಜೆ. ಸಂಗೀತ ನೀಡಿದ್ದಾರೆ. ಮಂಜುನಾಥ್ ನಾಯಕ್ ಅವರ ಛಾಯಾಗ್ರಹಣವಿದೆ. ಯೋಗಿ (ಲೂಸ್‍ ಮಾದ), ಹಿತಾ ಚಂದ್ರಶೇಖರ್, ವಸಿಷ್ಠ ಸಿಂಹ, ನೀನಾಸಂ ಅಶ್ವಥ್‌ ತಾರಾಗಣದಲ್ಲಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.