ADVERTISEMENT

ಕಂಚಿ ಘಟನೆ ಕುರಿತ ‘ಆಚಾರ್ಯ ಅರೆಸ್ಟ್’

​ಪ್ರಜಾವಾಣಿ ವಾರ್ತೆ
Published 13 ಜುಲೈ 2017, 19:30 IST
Last Updated 13 ಜುಲೈ 2017, 19:30 IST
ಶ್ರೀನಿವಾಸ್ ರಾಜು
ಶ್ರೀನಿವಾಸ್ ರಾಜು   

ಕಂಚಿ ಕಾಮಕೋಟಿ ಮಠದ ಬಗ್ಗೆ, ಅಲ್ಲಿನ ಪೀಠಾಧಿಪತಿಗಳಾಗಿರುವ ಜಯೇಂದ್ರ ಸರಸ್ವತಿ ಸ್ವಾಮೀಜಿ ಬಗ್ಗೆ, ಶಂಕರ್ ರಾಮನ್ ಕೊಲೆ ಪ್ರಕರಣದಲ್ಲಿ ಅವರನ್ನು ತಮಿಳುನಾಡು ಸರ್ಕಾರ ಬಂಧಿಸಿದ್ದರ ಬಗ್ಗೆ ದೇಶಕ್ಕೇ ಗೊತ್ತಿದೆ.

ಈಗಿನ ಹೊಸ ಸುದ್ದಿ ಅಂದರೆ, ಈ ಘಟನೆ ಕುರಿತು ಒಂದು ಸಿನಿಮಾ ಕನ್ನಡದಲ್ಲಿ ತೆರೆಗೆ ಬರಲಿದೆ. ಇದರ ಹೆಸರು 'ಆಚಾರ್ಯ ಅರೆಸ್ಟ್'. ಈ ಚಿತ್ರ ನಿರ್ದೇಶಿಸುತ್ತಿರುವವರು ಶ್ರೀನಿವಾಸ್ ರಾಜು. ಶ್ರೀಗಳ ಬಂಧನದ ಹಿಂದೆ ಇದ್ದಂತಹ ಪಿತೂರಿಗಳು ಏನು ಎಂಬ ಬಗ್ಗೆ ಮಾಹಿತಿ ಕಲೆ ಹಾಕಿ ಸಿನಿಮಾ ಮಾಡುತ್ತಿರುವುದಾಗಿ ಚಿತ್ರತಂಡ ಹೇಳಿಕೊಂಡಿದೆ.

ಶ್ರೀಗಳನ್ನು ಬಂಧಿಸಿದ್ದ ಅವಧಿಯಲ್ಲಿ ದೆಹಲಿ, ಹೈದರಾಬಾದ್, ಚೆನ್ನೈ ನಗರಗಳಲ್ಲಿ ಪರಿಸ್ಥಿತಿ ಹೇಗಿತ್ತು ಎಂಬ ಬಗ್ಗೆಯೂ ಸಿನಿಮಾದಲ್ಲಿ ವಿವರಣೆ ಇರಲಿದೆಯಂತೆ. ಬಂಧನದ ಸಮಯದಲ್ಲಿ ಮಠದಲ್ಲಿನ ಹಿರಿಯರೊಬ್ಬರು 'ಆಪತ್ತು ಕಾದಿದೆ' ಎಂದಿದ್ದರಂತೆ. ಈ ಬಗ್ಗೆಯೂ ಚಿತ್ರದಲ್ಲಿ ಉಲ್ಲೇಖ ಇರಲಿದೆಯಂತೆ.

ADVERTISEMENT

ಶ್ರೀಗಳ ಪಾತ್ರಕ್ಕೆ ಅನುಪಮ್ ಖೇರ್ ಅವರನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವುದು ನಿರ್ದೇಶಕರ ಆಸೆ. ಈ ಸಿನಿಮಾವನ್ನು ಏಕಕಾಲದಲ್ಲಿ ನಾಲ್ಕು ಭಾಷೆಗಳಲ್ಲಿ ಬಿಡುಗಡೆ ಮಾಡಬೇಕು ಎಂಬ ಇರಾದೆಯೂ ಅವರಿಗೆ ಇದೆ. ನವೆಂಬರ್‌ ವೇಳೆಗೆ ಚಿತ್ರವನ್ನು ತೆರೆಗೆ ತರಲು ಚಿತ್ರ ತಂಡ ಸಿದ್ಧತೆ ನಡೆಸಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.