ADVERTISEMENT

ಕಾಡಿನಲ್ಲಿ ಗ್ರ್ಯಾಂಡ್ ಫಿನಾಲೆ!

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2010, 10:30 IST
Last Updated 30 ಡಿಸೆಂಬರ್ 2010, 10:30 IST

ಸುವರ್ಣ ವಾಹಿನಿಯ ‘ಪ್ಯಾಟೆ ಮಂದಿ ಕಾಡಿಗ್ ಬಂದ್ರು’ ರಿಯಾಲಿಟಿ ಶೋನ ಗ್ರ್ಯಾಂಡ್ ಫಿನಾಲೆ ಜನವರಿ 2ರಂದು ಸತತ ಹದಿನಾಲ್ಕು ಗಂಟೆಗಳ ಕಾಲ ಪ್ರಸಾರವಾಗಲಿದೆ. ಕಾಡಿನ ಮಧ್ಯೆ ಪ್ರಾರಂಭವಾದ ಶೋವೊಂದರ ಫಿನಾಲೆ ಕಾಡಿನ ಮಧ್ಯೆ ನಡೆಯುತ್ತಿರುವುದು ವಿಶ್ವದಲ್ಲಿ ಇದೇ ಮೊದಲು ಎನ್ನುವುದು ಈ ರಿಯಾಲಿಟಿ ಶೋ ತಂಡದ ಅನಿಸಿಕೆ.

‘ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು’ ಹಾಗೂ ‘ಹಳ್ಳಿ ಹೈದ ಪ್ಯಾಟೆಗ್ ಬಂದ’ ರಿಯಾಲಿಟಿ ಶೋಗಳ ಯಶಸ್ಸಿನ ಜಾಡಿನಲ್ಲಿ ರೂಪುಗೊಂಡಿರುವ ‘ಪ್ಯಾಟೆ ಮಂದಿ ಕಾಡಿಗ್ ಬಂದ್ರು’ ಬುಡಕಟ್ಟು ಜನಾಂಗದ ಬದುಕಿನ ವಿವಿಧ ಆಯಾಮಗಳನ್ನು ಕಿರುತೆರೆಯಲ್ಲಿ ಬಿಂಬಿಸುವ ಪ್ರಯತ್ನ. ಹನ್ನೆರಡು ಪ್ಯಾಟೆ ಮಂದಿ ನಾಡಿನ ಕೊಳ್ಳುಬಾಕ ಸಂಸ್ಕೃತಿಯನ್ನು ಬಿಟ್ಟು ಕಾಡಿನ ಬದುಕಿಗೆ ಒಗ್ಗಿಕೊಳ್ಳಲು ನಡೆಸುವ ಪ್ರಯತ್ನ ಈ ಶೋನಲ್ಲಿ ನಡೆದಿದೆ. ಜ.2, ಭಾನುವಾರ ಬೆಳಿಗ್ಗೆ 9ರಿಂದ ರಾತ್ರಿ 11ರವರೆಗೆ ‘ಪ್ಯಾಟೆ ಮಂದಿ ಕಾಡಿಗ್ ಬಂದ್ರು’ ಗ್ರಾಂಡ್ ಫಿನಾಲೆ ಕಾರ್ಯಕ್ರಮ ಪ್ರಸಾರವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.