
ಪ್ರಜಾವಾಣಿ ವಾರ್ತೆಆರ್.ಶಂಕರ್ ನಿರ್ಮಾಣದ ‘ಕೆಂಪೇಗೌಡ’ದ ಪ್ರಥಮ ಪ್ರತಿ ಸಿದ್ದವಾಗಿದೆ. ಶೀಘ್ರದಲ್ಲೇ ಈ ಚಿತ್ರ ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ. ಸುದೀಪ್ ನಾಯಕನಾಗಿ ನಟಿಸಿ ನಿರ್ದೇಶಿಸಿರುವ ಈ ಚಿತ್ರದ ನಾಯಕಿ ರಾಗಿಣಿ. ಗಿರೀಶ್ ಕಾರ್ನಾಡ್, ಅಶೋಕ್, ಜೈಜಗದೀಶ್, ಅಶೋಕ್ ಖೇಣಿ,
ತಾರಾ, ಚಿತ್ರಾ ಶೆಣೈ, ಸಂಗೀತ, ದತ್ತಣ್ಣ, ಶರಣ್, ಬುಲೆಟ್ ಪ್ರಕಾಶ್ ಮುಂತಾದವರ ತಾರಾಗಣವಿದೆ.
ಅರ್ಜುನ್ ಸಂಗೀತ, ಎಸ್.ಕೃಷ್ಣ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ನಾಗೇಂದ್ರ ಅರಸ್ ಸಂಕಲನವಿದೆ. ರವಿವರ್ಮ-ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ, ಅರುಣ್ ಸಾಗರ್ ಕಲಾ ನಿರ್ದೇಶನ, ಹರ್ಷ-ಪ್ರದೀಪ್ ಅಂಥೋಣಿ ನೃತ್ಯ ನಿರ್ದೇಶನ ಹಾಗೂ ನರಸಿಂಹ ಜಾಲಹಳ್ಳಿ ನಿರ್ಮಾಣ ನಿರ್ವಹಣೆಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.