ADVERTISEMENT

ಚಂದನದಲ್ಲಿ ಹೊಸಬೆಳಕು

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2012, 19:30 IST
Last Updated 19 ಏಪ್ರಿಲ್ 2012, 19:30 IST

ಬ್ರೊಂಝೆ ಸಂಸ್ಥೆ ನಿರ್ಮಿಸುತ್ತಿರುವ, ಬಾಲಾಜಿ ಅವರ ನಿರ್ದೇಶನದ `ಹೊಸಬೆಳಕು~ ಕಾರ್ಯಕ್ರಮ ಸೀಸನ್-1 ಯಶಸ್ವೀ ಇಪ್ಪತ್ತಾರು ಸಂಚಿಕೆಗಳನ್ನು ಪೂರೈಸಿ ಸೀಸನ್-2ರ ಸಂಚಿಕೆಗಳನ್ನು ಆರಂಭಿಸಲಿದೆ.
 
`ಚಂದನ~ ವಾಹಿನಿಯಲ್ಲಿ ಪ್ರಸಾರಗೊಳ್ಳುವ ಇದು, ವೇದಗಳ ಬಗ್ಗೆ ಭಾರತೀಯ ಕಿರುತೆರೆಯಲ್ಲಿ ಮೂಡಿಬರುವ ಏಕೈಕ ಕಾರ್ಯಕ್ರಮ ಎಂದು `ಹೊಸಬೆಳಕು~ ತಂಡ ಹೇಳಿಕೊಂಡಿದೆ.

ಮೊದಲ ಸೀಸನ್‌ನಲ್ಲಿ ವೇದ, ಆಚಾರ ವಿಚಾರ ಮತ್ತು ಷೋಡಶ ಸಂಸ್ಕಾರಗಳ ಬಗ್ಗೆ ಸುಧಾಕರ ಶರ್ಮ, ವಿನಯಾ ಪ್ರಸಾದ್ ಅವರೊಂದಿಗೆ ಚರ್ಚಿಸಿದ್ದರು. ಇದೀಗ ಎರಡನೇ ಸೀಸನ್‌ನಲ್ಲಿ ವಿನಯಾ ಅವರ ಜಾಗದಲ್ಲಿ ಅಪರ್ಣ ಅವರು ಬಂದಿದ್ದಾರೆ. ಅವರು, ಸುಧಾಕರ ಶರ್ಮ ಅವರೊಂದಿಗೆ ಚಿಂತನ ಮಂಥನ ಮುಂದುವರಿಸಲಿದ್ದಾರೆ.

`ಹೊಸಬೆಳಕು~ ಕಾರ್ಯಕ್ರಮ ಒಂದು ವೈಚಾರಿಕ ಕ್ರಾಂತಿ. ವೇದಗಳ ಮೇಲಿರುವ ಆಪಾದನೆಗಳನ್ನು ಹೊಡೆದೋಡಿಸಿ. ಮೂಢನಂಬಿಕೆಗಳನ್ನು ತೆರವುಗೊಳಿಸಿ, ವೈಜ್ಞಾನಿಕವಾದ ಸತ್ಯ ಸಂಪ್ರದಾಯವನ್ನು ಪರಿಚಯಿಸುವುದೇ ತಮ್ಮ ಕಾರ್ಯಕ್ರಮದ ಉದ್ದೇಶ ಎಂದು ಕಾರ್ಯಕ್ರಮದ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

`ಹೊಸಬೆಳಕು~ ಕಾರ್ಯಕ್ರಮ ಪ್ರತೀ ಭಾನುವಾರ ಬೆಳಿಗ್ಗೆ 9.30ರಿಂದ 10 ಗಂಟೆವರೆಗೆ ಪ್ರಸಾರವಾಗುತ್ತಿದೆ.          

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.