ADVERTISEMENT

ಚಿತ್ರರಂಗದ ಸಂಕ್ಷಿಪ್ತ ಸುದ್ದಿಗಳು

​ಪ್ರಜಾವಾಣಿ ವಾರ್ತೆ
Published 2 ಜೂನ್ 2011, 19:30 IST
Last Updated 2 ಜೂನ್ 2011, 19:30 IST

ಉಪೇಂದ್ರ ಈಗ `ಆರಕ್ಷಕ~
ಪಿ.ವಾಸು ನಿರ್ದೇಶನದಲ್ಲಿ ಉಪೇಂದ್ರ ನಾಯಕನಾಗಿ ಅಭಿನಯಿಸುತ್ತಿರುವ ಚಿತ್ರಕ್ಕೆ `ಆರಕ್ಷಕ~ ಎಂದು ಹೆಸರಿಡಲಾಗಿದೆ. ಈಗಾಗಲೇ ಮೈಸೂರಿನಲ್ಲಿ ಚಿತ್ರೀಕರಣ ಆರಂಭವಾಗಿದೆ.

ಕೃಷ್ಣಪ್ರಜ್ವಲ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡುತ್ತಿದ್ದಾರೆ. ಮೈಸೂರು, ಕೇರಳ ಹಾಗೂ ವಿದೇಶದಲ್ಲಿ ಚಿತ್ರೀಕರಣ ನಡೆಯಲಿದೆ. ಸದಾ, ಸೀತಾ, ಶಯಾಜಿ ಶಿಂಧೆ, ರಾಗಿಣಿ ಮುಂತಾದವರ ತಾರಾಬಗಳವಿದೆ.

ನಿರ್ದೇಶಕರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದು, ಸುರೇಶ್ ಅರಸ್ ಸಂಕಲನ, ವೇಣು ಕಲಾ ನಿರ್ದೇಶನ, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಮತ್ತು ಚಂಪಕಧಾಮ ಬಾಬು ನಿರ್ಮಾಣ ನಿರ್ವಹಣೆ ಚಿತ್ರಕ್ಕಿದೆ.

---------------

ಪ್ರಥಮ ಹಂತ ಮುಗಿಸಿದ `ಒಂದು ಕ್ಷಣದಲ್ಲಿ~
ಜೈಜಗದೀಶ್ ನಿರ್ಮಿಸುತ್ತಿರುವ `ಒಂದು ಕ್ಷಣದಲ್ಲಿ~ ಚಿತ್ರದ ಪ್ರಥಮ ಹಂತದ ಚಿತ್ರೀಕರಣ ಮೈಸೂರಿನಲ್ಲಿ ಮುಕ್ತಾಯಗೊಂಡಿತು. ಹದಿನಾರು ದಿನ ನಡೆದ ಚಿತ್ರೀಕರಣದಲ್ಲಿ ತರುಣ್, ಭಾಮಾ, ಬ್ರಹ್ಮಾವರ್, ಸಂಜನಾ ಭಾಗವಹಿಸಿದ ಹಲವಾರು ಸನ್ನಿವೇಶಗಳನ್ನು ಮೈಸೂರು, ಮಹದೇವಪುರ ಸುತ್ತ ಮುತ್ತ ಸುರೇಶ್ (ಬೈರಸಂದ್ರ) ಛಾಯಾಗ್ರಹಣದಲ್ಲಿ ನಿರ್ದೇಶಕ ದಿನೇಶ್ ಬಾಬು ಚಿತ್ರಿಸಿಕೊಂಡರು.

ಗಿರಿಧರ್ ದಿವಾನ್ ಸಂಗೀತ, ಕೆಂಪರಾಜ್ ಸಂಕಲನ, ಬಾಬುಖಾನ್ ಕಲೆ, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನದ ಹೊಣೆ ದಿನೇಶ್ ಬಾಬು ಅವರದು. ತಾರಾಗಣದಲ್ಲಿ ತರುಣ್, ಭಾಮಾ, ಸಂಜನಾ, ಶರಣ್, ಜೈಜಗದೀಶ್, ಬ್ರಹ್ಮಾವರ್, ಸತ್ಯಜಿತ್, ಉಮೇಶ್, ಸಂಗೀತಾ, ಶೀಲಾ, ಶಶಿಕಲಾ ಮುಂತಾದವರಿದ್ದಾರೆ.

---------------

`ಹಕ್ಕ-ಬುಕ್ಕ~: ಮೊದಲ ಹಂತ ಮುಕ್ತಾಯ
ರವಿಶಂಕರ್ ಮತ್ತು ತಬಲಾ ನಾಣಿಯನ್ನು ಕೊಲೆ ಕೇಸಿನಲ್ಲಿ ಪೊಲೀಸ್ ಸ್ಟೇಷನ್ನಿಗೆ ಕರೆದುಕೊಂಡು ಬಂದಾಗ ಅಲ್ಲಿ ನಡೆಯುವ ಹಾಸ್ಯದ ದೃಶ್ಯಗಳನ್ನು `ಹಕ್ಕ - ಬುಕ್ಕ~ ಚಿತ್ರಕ್ಕಾಗಿ ಚಿತ್ರಿಸಿಕೊಳ್ಳುವ ಮೂಲಕ ಈ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಯಿತು.

ಸಂತೋಷ್ ಭಂಡಾರಿ ನಿರ್ಮಿಸುತ್ತಿರುವ ಈ ಚಿತ್ರವನ್ನು ಯು.ಕೆ.ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಸುರೇಶ್ ಬಾಬು ಛಾಯಾಗ್ರಹಣ, ಅಜನೀಶ್ ಸಂಗೀತ, ರಾಜಶೇಖರ ರಾವ್ ಸಂಭಾಷಣೆ, ಡಿಫರೆಂಟ್ ಡ್ಯಾನಿ ಸಾಹಸ, ಕವಿರಾಜ್, ರಾಜಶೇಖರ್ ರಾವ್ ಸಾಹಿತ್ಯ, ಮದನ್ ಹರಿಣಿ ನೃತ್ಯ ನಿರ್ದೇಶನ, ವಿನೋದ್ ಮನೋಹರ್ ಸಂಕಲನ ಚಿತ್ರಕ್ಕಿದೆ.
 
ತಾರಾಬಳಗದಲ್ಲಿ ರವಿಶಂಕರ್, ತಬಲಾನಾಣಿ, ರಾಧಿಕಾಗಾಂಧಿ, ಸತ್ಯಜಿತ್, ನೀನಾಸಂ ಅಶ್ವತ್ಥ್, ಅರವಿಂದ್, ಹೊನ್ನವಳ್ಳಿ ಕೃಷ್ಣ, ಜಯಶೀಲಾ, ಬ್ಯಾಂಕ್ ಜನಾರ್ದನ್ ಹಾಗೂ ಶ್ರಿನಿವಾಸಗೌಡ ಇದ್ದಾರೆ.

--------------

ADVERTISEMENT

`ಲವ್ ಜಂಕ್ಷನ್~ಗೆ ಮಾತಿನ ಮರುಲೇಪನ ಪೂರ್ಣ
ಎಂ.ಲೋಕೇಶ್, ಶ್ರಿನಿವಾಸ್ ಮೂರ್ತಿ (ಸೋಮನಹಳ್ಳಿ) ನಿರ್ಮಿಸುತ್ತಿರುವ `ಲವ್ ಜಂಕ್ಷನ್~ ಚಿತ್ರದ ಡಬ್ಬಿಂಗ್ ಕಾರ್ಯ ಮುಗಿಯಿತು. ಶೀಘ್ರ ರೀರೆಕಾರ್ಡಿಂಗ್ ಮತ್ತು ಮಿಕ್ಸಿಂಗ್ ಕಾರ್ಯ ಆರಂಭವಾಗಲಿದೆ.

ಚಿತ್ರಕ್ಕೆ ಎಸ್.ಎನ್.ಬಿ. ಮೂರ್ತಿ ಛಾಯಾಗ್ರಹಣ, ಅನನ್ಯ ಭಾರ್ಗವ ಸಂಗೀತ, ಕೃಷ್ಣಾಚಾರಿ ಕಲೆ, ಕಪಿಲ್, ರಾಜದೇವ್ ನೃತ್ಯ, ರಾಜಶೇಖರ ರೆಡ್ಡಿ, ಶಿವರಾಜ್ ಮೇಹು ಸಂಕಲನ, ಬಿರಾದಾರ್, ಸಿದ್ದರಾಜ್, ನಿರ್ಮಾಣ ನಿರ್ವಹಣೆ ಇದೆ. ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನ ವಾಸುದೇವ್ ಆಲೂರು ಅವರದು.

ತಾರಾಗಣದಲ್ಲಿ ಅಂದಾನ್ ಕುಮಾರ್, ಯಜ್ಞಾಶೆಟ್ಟಿ, ಶಶಿಕುಮಾರ್, ರಾಮಕೃಷ್ಣ, ಅವಿನಾಶ್, ಸತ್ಯಜಿತ್ ಮುಂತಾದವರಿದ್ದಾರೆ.

--------------

ಮೈಸೂರಿನಲ್ಲಿ `ಟಿಪ್ಪು~
ಯೋಗೀಶ್ ಹುಣಸೂರು ನಿರ್ಮಿಸುತ್ತಿರುವ `ಟಿಪ್ಪು~ ಚಿತ್ರಕ್ಕೆ ಮೈಸೂರಿನಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಆದಿತ್ಯ ನಾಯಕನಾಗಿ ಅಭಿನಯಿಸುತ್ತಿರುವ ಈ ಚಿತ್ರದ ನಾಯಕಿ ರಾಗಿಣಿ. ರಂಗಾಯಣ ರಘು, ಶೋಭರಾಜ್, ಮಾಲತಿ ಸರ್‌ದೇಶಪಾಂಡೆ, ಅವಿನಾಶ್ ಮುಂತಾದವರು ಉಳಿದ ಕಲಾವಿದರು. ಚಿತ್ರದ ಹಾಡೊಂದಕ್ಕೆ ಮುಂಬೈನ ಸಿಮ್ರಾನ್ ಕೂಡ ಹೆಜ್ಜೆ ಹಾಕಲಿದ್ದಾರೆ.
 
ಎಂ.ಎಸ್.ರಮೇಶ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಗುರುಕಿರಣ್ ಸಂಗೀತ, ದಾಸರಿಸೀನು ಛಾಯಾಗ್ರಹಣ, ಎಸ್.ಮನೋಹರ್ ಸಂಕಲನ, ರಾಂಶೆಟ್ಟಿ ಸಾಹಸ ನಿರ್ದೇಶನ ಇದೆ. 

-------------

ಮುಕ್ತಾಯ ಹಂತದಲ್ಲಿ `ಜನ್ಮ~
ಆನೇಕಲ್ ಬಾಲರಾಜ್ ನಿರ್ಮಾಣದ ಚಕ್ರವರ್ತಿ ನಿರ್ದೇಶನದ `ಜನ್ಮ~ ಚಿತ್ರದ ಚಿತ್ರೀಕರಣ ಮುಕ್ತಾಯ ಹಂತದಲ್ಲಿದೆ. ಈಗಾಗಲೇ ಮಂಗಳೂರು, ಮಲ್ಪೆ, ಉಡುಪಿ, ತಲಕಾವೇರಿ, ತೀರ್ಥಹಳ್ಳಿ, ಕೊಡಚಾದ್ರಿ, ಚೆನ್ನೈ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಯಿತು.
 
ಛಾಯಾಗ್ರಾಹಕ ಜಗದೀಶ್ ವಾಲಿ, ಸಂಗೀತ ನಿರ್ದೇಶಕ ಅನೂಪ್ ಸೀಳಿನ್, ಸಂಕಲನಕಾರ ಕೆ.ಗಿರೀಶ್‌ಕುಮಾರ್, ಸಾಹಸ ನಿರ್ದೇಶಕ ಕೌರವ ವೆಂಕಟೇಶ್. ನಾಯಕ ಸಂತೋಷ್. ನಾಯಕಿ ಮೀನಾಕ್ಷಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.