ADVERTISEMENT

ಜಾನಿ ಜಾನಿ ಯೆಸ್ ಪಪ್ಪಾ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2018, 19:30 IST
Last Updated 29 ಮಾರ್ಚ್ 2018, 19:30 IST

ಜಾನಿ ಜಾನಿ ಯೆಸ್ ಪಪ್ಪಾ

ದುನಿಯಾ ವಿಜಯ್ ನಾಯಕರಾಗಿ ನಟಿಸಿರುವ ಈ ಚಿತ್ರವನ್ನು ಪ್ರೀತಂ ಗುಬ್ಬಿ ನಿರ್ದೇಶಿಸಿದ್ದಾರೆ. ತಬಲಾ ನಾಣಿ ಸಂಭಾಷಣೆ ಬರೆದಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಕರುಣಾಕರ್ ಛಾಯಾಗ್ರಹಣ ಚಿತ್ರಕ್ಕಿದೆ. ರಚಿತಾ ರಾಮ್, ರಂಗಾಯಣ ರಘು, ಸಾಧು ಕೋಕಿಲ, ಅಚ್ಯುತ್ ಕುಮಾರ್, ಗಡ್ಡಪ್ಪ ತಾರಾಗಣದಲ್ಲಿ ಇದ್ದಾರೆ.

ಇದೀಗ ಬಂದ ಸುದ್ದಿ

ADVERTISEMENT

ಎಸ್.ಆರ್. ಪಾಟೀಲ್ ನಿರ್ದೇಶನದ ಈ ಚಿತ್ರಕ್ಕೆ ಸತೀಶ್ ರಾಜೇಂದ್ರನ್ ಛಾಯಾಗ್ರಹಣವಿದೆ. ಜೋಯ್ಸ್ ಸ್ಯಾಮುಯಲ್ ಸಂಗೀತ ನಿರ್ದೇಶನ, ಎರಿಕ್ ಜಾನ್ಸನ್ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ. ತಾರಾಬಳಗದಲ್ಲಿ ಬಲರಾಮ್ ಕನ್ನಡಿಗ, ಮಾಧವ್, ಶಿವಕುಮಾರ್, ಕಾವ್ಯಾ, ಲೋಕೇಶ್ವರಿ ಇದ್ದಾರೆ.

ಹೀಗೊಂದು ದಿನ

ಸಿಂಧೂ ಲೋಕನಾಥ್ ಮುಖ್ಯ ಪಾತ್ರದಲ್ಲಿರುವ ಈ ಚಿತ್ರದ ನಿರ್ದೇಶನ ವಿಕ್ರಮ್ ಯೋಗಾನಂದ್ ಅವರದ್ದು. ಪ್ರವೀಣ್ ತೇಜ್, ಗುರುಪ್ರಸಾದ್, ಪದ್ಮಜಾ ರಾವ್, ನಾಗೇಂದ್ರ ಶಾ, ಶೋಭರಾಜ್, ಮಿತ್ರ, ಗಿರಿ, ಬಾಲನ್ ಮನೋಹರ್, ಗಿರಿಜಾ ಲೋಕೇಶ್ ತಾರಾಗಣದಲ್ಲಿ ಇದ್ದಾರೆ. ದಿವ್ಯದೃಷ್ಟಿ ಚಂದ್ರಶೇಖರ್ ನಿರ್ಮಾಪಕರು. ಪರಶುರಾಮ್ ಕಾರ್ಯಕಾರಿ ನಿರ್ಮಾಪಕರು. ಅಭಿಲಾಷ್ ಗುಪ್ತ ಸಂಗೀತ ಸಂಯೋಜಿಸಿದ್ದಾರೆ.

ಗುಲ್ಟು ಆನ್‌ಲೈನ್‌

ಜನಾರ್ದನ್ ಚಿಕ್ಕಣ್ಣ ನಿರ್ದೇಶನದ ಸಿನಿಮಾ ಇದು. ನವೀನ್‌ ಶಂಕರ್, ಸೋನು ಗೌಡ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಜನರ ಮಾಹಿತಿ ಕದಿಯುವುದು, ಅದರಿಂದ ಆಗುವ ಅಪಾಯಗಳು ಈ ಸಿನಿಮಾದ ಕಥಾವಸ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.