ADVERTISEMENT

ತೀರಾ ತೆಳ್ಳಗೆ ಕಾಣುವ ದೀಪಿಕಾ ಪಡುಕೋಣೆ ಬಗ್ಗೆ ಟ್ರೋಲ್‌ ಕಾಲೆಳೆತ!

ಏಜೆನ್ಸೀಸ್
Published 14 ಜುಲೈ 2017, 11:06 IST
Last Updated 14 ಜುಲೈ 2017, 11:06 IST
ತೀರಾ ತೆಳ್ಳಗೆ ಕಾಣುವ ದೀಪಿಕಾ ಪಡುಕೋಣೆ ಬಗ್ಗೆ ಟ್ರೋಲ್‌ ಕಾಲೆಳೆತ!
ತೀರಾ ತೆಳ್ಳಗೆ ಕಾಣುವ ದೀಪಿಕಾ ಪಡುಕೋಣೆ ಬಗ್ಗೆ ಟ್ರೋಲ್‌ ಕಾಲೆಳೆತ!   

ಮುಂಬೈ: ನಟೀಮಣಿಯರು ತೆಳ್ಳಗಾಗುವುದು ಹೊಸ ವಿಷಯವೇನಲ್ಲ. ‘ಜೀರೋಸೈಜ್’ ಎಂಬ ಪರಿಭಾಷೆ ಹುಟ್ಟಿರುವುದೇ ನಟಿಯರಿಗಾಗಿ ಎನ್ನುವಂತಾಗಿದೆ ಸಿನಿಜಗತ್ತು. ಆದರೆ, ಇತ್ತೀಚೆಗೆ ತೀರಾ ತೆಳ್ಳಗೆ ಕಾಣಿಸಿಕೊಂಡಿರುವ ನಟಿ ದೀಪಿಕಾ ಪಡುಕೋಣೆ ನೆಟ್ಟಿಗರಿಂದ ಟ್ರೋಲ್‌ ಆಗಿದ್ದಾರೆ!

‘ವ್ಯಾನಿಟಿ ಫೇರ್‌’ ನಿಯತಕಾಲಿಕೆಗಾಗಿ ಫೋಟೊ ಶೂಟ್‌ ನಡೆಸಿದ್ದ ದೀಪಿಕಾ ಗುರುವಾರ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಪೋಸ್ಟ್ ಮಾಡಿರುವ ಚಿತ್ರದಲ್ಲಿ ತೀರಾ ತೆಳ್ಳಗೆ ಕಾಣುತ್ತಿದ್ದಾರೆ. ‘ದೀಪಿಕಾ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ’ ಎಂದು ಹಲವರು ಈ ಚಿತ್ರಕ್ಕೆ ಕಮೆಂಟ್‌ ಮಾಡಿದ್ದಾರೆ.

‘ಈ ರೋಗದ ಕೋಳಿಯನ್ನು ಯಾರಾದರೂ ಆಸ್ಪತ್ರೆಗೆ ಸೇರಿಸಿ. ‘ಚೀಪಿಕಾ’ಗೆ ಒಳ್ಳೆಯ ಚಿಕಿತ್ಸೆ ಬೇಕಿದೆ’ ಎಂದು ಒಬ್ಬರು ಕಾಲೆಳೆದಿದ್ದರೆ, ‘ನೀವಿನ್ನೂ ರಣಬೀರ್‌ ಕಪೂರ್‌ ಅವರಿಂದ ದೂರವಾದ ಖಿನ್ನತೆಯಲ್ಲೇ ಇರುವಂತಿದೆ. ಅದರಿಂದ ಹೊರ ಬಂದು ಏನನ್ನಾದರೂ ತಿನ್ನಿ’ ಎಂದು ಮತ್ತೊಬ್ಬರು ಕಮೆಂಟಿಸಿದ್ದಾರೆ.

ADVERTISEMENT

ದೀಪಿಕಾ ಚಿತ್ರದ ಬಗ್ಗೆ ಕೆಲವು ಕಮೆಂಟ್‌ಗಳು ಹೀಗಿವೆ ನೋಡಿ:

‘ನೀವು ತಿನ್ನುವುದನ್ನು ಮರೆತಂತಿದೆ. ಹೋಗಿ ತಿನ್ನಿ’

‘ಇದು ಅಪೌಷ್ಟಿಕತೆ’

‘ಪೌಷ್ಟಿಕತೆಯ ಕೊರತೆ ಇರುವಂತೆ ಕಾಣುತ್ತಿದ್ದೀರಿ’

‘ಏನನ್ನಾದರೂ ತಿನ್ನಮ್ಮಾ...’

‘ಸ್ವಲ್ಪವಾದರೂ ಆರೋಗ್ಯವಾಗಿರು ದೀಪಿಕಾ’

* * *



ಸೈಜ್‌ ಜೀರೋ!
ಅಂದಹಾಗೆ, ಜೀರೋಸೈಜ್‌ಗೆ ವಿರುದ್ಧವಾಗಿ ಪಾತ್ರದ ‘ಅಗತ್ಯ’ಕ್ಕೆ ತಕ್ಕಂತೆ ನಟಿಯರು ದಪ್ಪವಾಗುವುದೂ ಇದೆ. ‘ಸೈಜ್‌ ಜೀರೋ’ ಚಿತ್ರಕ್ಕಾಗಿ ಸುಮಾರು 20 ಕೆ.ಜಿ.ಯಷ್ಟು ತೂಕ ಹೆಚ್ಚಿಸಿಕೊಂಡಿದ್ದ ನಟಿ ಅನುಷ್ಕಾ ಶೆಟ್ಟಿ ತೂಕ ಇಳಿಸಿಕೊಳ್ಳಲು ಇನ್ನೂ ಕಸರತ್ತು ಮಾಡುತ್ತಲೇ ಇದ್ದಾರಂತೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.