ADVERTISEMENT

ನನ್ನಪ್ಪನ ನೆನಪು ಕಾಡುತ್ತದೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2012, 19:30 IST
Last Updated 2 ಏಪ್ರಿಲ್ 2012, 19:30 IST

ಹರಿವಂಶ್‌ರಾಯ್ ಬಚ್ಚನ್ ಅವರ ಕಾವ್ಯ ಆಧಾರಿತ ಅಲ್ಬಂಗೆ ಧ್ವನಿ ನೀಡುತ್ತಿರುವ ಅಮಿತಾಬ್ ಬಚ್ಚನ್ ತಮ್ಮ ತಂದೆಯನ್ನು ಬಹಳ `ಮಿಸ್~ ಮಾಡಿಕೊಳ್ಳುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

`ಸಿಲ್‌ಸಿಲಾ~ ಚಿತ್ರದ ಸಂದರ್ಭದಲ್ಲಿಯೂ ಹರಿವಂಶ್ ಅವರ ಸಾಹಿತ್ಯಕ್ಕೆ ಅಮಿತಾಬ್ ಧ್ವನಿಯಾಗಿದ್ದರು. ಆದರೆ ಅದಕ್ಕೆ ಭಾವದುಂಬಲು ಅಪ್ಪ ಜೊತೆಗಿದ್ದರು. ಕಾವ್ಯವನ್ನು ಪ್ರೀತಿಯಿಂದ ಓದಿ ಹೇಳುತ್ತಿದ್ದರು. ಅರ್ಥೈಸಿಕೊಳ್ಳಲು ವಿವರಣೆ ನೀಡುತ್ತಿದ್ದರು.

ಭಾವದೆಳೆಯನ್ನು ಅರ್ಥ ಮಾಡಿಕೊಂಡಾಗಲೇ ಜೀವದುಂಬುವ ಸಾಧ್ಯತೆ ಇದೆ. ಈಗ ಅವರ ಕವಿತೆಗಳ ಆಲ್ಬಂ `ಮಧುಶಾಲಾ~ ಸಿದ್ಧವಾಗುತ್ತಿದೆ. ಈ ಕ್ಷಣದಲ್ಲಿ ಅಪ್ಪ ತುಂಬ ನೆನಪಾಗುತ್ತಾರೆ. ಅವರ ಧ್ವನಿ, ಅವರ ವಿಚಾರಗಳ ಬಗ್ಗೆ ನೆನಪಿಸಿಕೊಂಡಾಗ ಮನಸ್ಸು ಆರ್ದ್ರಗೊಳ್ಳುತ್ತದೆ.

ನಾನು ಆಗಾಗ ಮತ್ತೆ ಮತ್ತೆ ಅಪ್ಪನ `ರುಬಾಯಿ~ಗಳನ್ನು ಹೇಳಿಕೊಳ್ಳುತ್ತೇನೆ. ಪ್ರತಿಯೊಂದು ಶಬ್ದವೂ ಅಪ್ಪ ಹೇಳಿದಂತೆಯೇ ಹೇಳಲು ಯತ್ನಿಸುತ್ತೇನೆ. ಅವರು ಓದಿದ್ದು ನೆನ್ನೆ -ಮೊನ್ನೆಯೋ ಎಂಬಂತಿದೆ. ಅದಿನ್ನೂ ಕಿವಿಯಲ್ಲಿ ಅನುರಣಿಸುತ್ತಿದೆ.

ನಾಲ್ಕು ಸಾಲುಗಳ ಈ ಪದ್ಯ ಅಪ್ಪನ ನೆನಪು ಗಾಢವಾಗಿ ಕಾಡುವಂತೆ ಮಾಡಿವೆ. ಒಮ್ಮಮ್ಮೆ ಹನಿಗಣ್ಣಾದರೂ ಕೆನ್ನೆಗಿಳಿಯದ ಕಂಬನಿ ಭಾವತೀವ್ರತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದೆಲ್ಲ ಬಿಗ್‌ಬಿ ಹೇಳಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.