ADVERTISEMENT

ನಾನು ಐಟಂ ನಂಬರ್ ಅಲ್ಲ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2012, 19:30 IST
Last Updated 25 ಮಾರ್ಚ್ 2012, 19:30 IST

ನಾನು ಐಟಂ ಸಾಂಗ್ ಮಾಡಲಾರೆ ಅಂತ ಉದ್ಗರಿಸಿದ್ದು ನೀಳ ಸುಂದರಿ ಸೋನಂ ಕಪೂರ್.ಚಂಚಲ ಕಣ್ಣು, ಚೂಪುಗಲ್ಲ, ಸಪೂರ ಮೈಮಾಟವಿದ್ದರೂ ನಾನು ಐಟಂ ಸಾಂಗ್‌ಗೆ ಹೆಜ್ಜೆ ಹಾಕಲಾರೆ.

ಮಾದಕ ಚೆಲುವು ನನ್ನದಲ್ಲ, ಆ ಪ್ರಚೋದನಾತ್ಮಕ ನೋಟವೂ ನನಗಿಲ್ಲ ಎಂದು ಹೇಳಿರುವ ಸೋನಂ ಐಟಂಗೆ ನಾನು ಸರಿಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾಳೆ.
ಅಷ್ಟೇ ಅಲ್ಲ, ಸೋನಂಗೆ `ಮುನ್ನಿ~ಯ ಮಲೈಕಾ ಅರೋರಾ ಖಾನ್ ಎಂದರೆ ಅಚ್ಚುಮೆಚ್ಚಂತೆ.

ಮಲೈಕಾ `ಗಿಫ್ಟೆಡ್ ಐಟಂ~ ಎಂದೂ ಹೇಳಿದ್ದಾರೆ. ಸಂಕೋಚ, ನಿರ್ಭಿಡೆಯ ಹೆಜ್ಜೆ, ಲಾಲಿತ್ಯ, ತುಂಟತನ ಇವೆಲ್ಲವನ್ನೂ ರೂಢಿಸಿಕೊಳ್ಳಬೇಕಿದೆ. ಐಟಂ ನಂಬರ್‌ಗೆ ಕಲಿಯಬೇಕಾಗಿರುವುದು ಸಾಕಷ್ಟಿದೆ ಎಂದೂ ಸೋನಂ ಒಪ್ಪಿಕೊಂಡಿದ್ದಾಳೆ.

ಜೊತೆಗೆ ಮಲೈಕಾ ಅರೋರಾ ಈ ತಲೆಮಾರಿನ ಹೆಲನ್ ಇದ್ದಂತೆ. ಅವರು ಹೆಜ್ಜೆ ಹಾಕಿದರೆ ಸಾಕು, ಪಡ್ಡೆ ಮನಗಳು ನರ್ತನಕ್ಕೆ ಆರಂಭಿಸುತ್ತವೆ. ಆ ಮಾದಕ ಚೆಲುವು, ಮೈಮಾಟ ಹಾಗೂ ಭಾವಾಭಿವ್ಯಕ್ತಿ ಎಲ್ಲವೂ ಅವರಿಗೆ ಹೇಳಿ ಮಾಡಿಸಿದಂತಿದೆ ಎಂದು `ಮುನ್ನಿ~ ಬಗ್ಗೆ ಹಾಡಿ ಹೊಗಳಿದ್ದಾರೆ ಸೋನಂ.

ಸದ್ಯ ಓಮ್ ಪ್ರಕಾಶ್ ಮೆಹ್ರಾ ಅವರ `ಭಾಗ್ ಮಿಲ್ಖಾ ಭಾಗ್~ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿರುವ ಸೋನಂ ಫರ‌್ಹಾನ್ ಅಖ್ತರ್‌ನೊಂದಿಗೆ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.