
“ಜಿಮ್‌ನಲ್ಲಿ ಬೆವರು ಹರಿಸಿ ಮಾಂಸಖಂಡಗಳನ್ನು ಹುರಿಗೊಳಿಸಿದ ಮಾತ್ರಕ್ಕೆ ಹಾಗೂ ಕೂದಲು ಉದ್ದ ಬಿಟ್ಟಾಕ್ಷಣ ಉತ್ತಮವಾಗಿ ನಟಿಸಿದ್ದಾರೆ ಎಂದಾಗದು. ಹೀಗಾಗಿ ‘ಭಾಗ್ ಮಿಲ್ಖಾ ಭಾಗ್’ ಚಿತ್ರ ನೈಜ ಘಟನೆಯನ್ನು ಆಧರಿಸಿದ್ದು ಎಂದು ನನಗನಿಸುತ್ತಿಲ್ಲ.
ಅದೊಂದು ಕಳಪೆ ಚಿತ್ರ’’ ಎಂದು ಇತ್ತಿಚೆಗೆ ಹಿರಿಯ ನಟ ನಾಸಿರುದ್ದೀನ್ ಶಾ ಟೀಕಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ನಟ ಫರ್‍್ಹಾನ್ ಅಖ್ತರ್ ‘ಪ್ರತಿಯೊಬ್ಬರಿಗೂ ಅವರದ್ದೇ ಆದ ಅಭಿಪ್ರಾಯವಿರುತ್ತದೆ. ಅದನ್ನು ನಾವು ಗೌರವಿಸಬೇಕು’ ಎಂದಷ್ಟೇ ಹೇಳಿದ್ದಾರೆ.
‘ಸಿನಿಮಾ ಕುರಿತು ಪ್ರತಿಯೊಬ್ಬರೂ ಅವರದ್ದೇ ಆದ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಅವುಗಳಲ್ಲಿ ಹೆಚ್ಚಿನ ಸಂಖ್ಯೆಯ ವೀಕ್ಷಕರು ನೀಡಿರುವ ಅಭಿಪ್ರಾಯ ಹಾಗೂ ಸಕಾರಾತ್ಮಕ ಪ್ರತಿಕ್ರಿಯೆಗಳೆಷ್ಟು ಎಂಬುದಷ್ಟೇ ಮುಖ್ಯ’ ಎಂದು ಫರ್‍ಹಾನ್ ಹೇಳಿದ್ದಾರೆ.
ಅಥ್ಲೀಟ್ ದಂತಕಥೆ ಮಿಲ್ಖಾ ಸಿಂಗ್ ಅವರ ಜೀವನ ಆಧಾರಿತ ಚಲನಚಿತ್ರ ‘ಭಾಗ್ ಮಿಲ್ಖಾ ಭಾಗ್’ ನೂರು ಕೋಟಿ ರೂಪಾಯಿಗೂ ಹೆಚ್ಚು ವಹಿವಾಟು ನಡೆಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.