ADVERTISEMENT

ಪಟ್ರೆಯ ಜಾಲತಾಣ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2012, 19:30 IST
Last Updated 9 ಆಗಸ್ಟ್ 2012, 19:30 IST
ಪಟ್ರೆಯ ಜಾಲತಾಣ
ಪಟ್ರೆಯ ಜಾಲತಾಣ   

ನಾಯಕನಾಗಿ ಯಶ ಕಾಣದಿದ್ದರೂ ಪಟ್ರೆ ಅಜಿತ್ ಚಿತ್ರರಂಗದಲ್ಲಿ ತಮ್ಮನ್ನು ಗುರುತಿಸಿಕೊಳ್ಳುವ ಸಲುವಾಗಿ ಹೊಸ ಹೆಜ್ಜೆಗಳನ್ನಿರಿಸಿದ್ದಾರೆ. ಆಗಸ್ಟ್ ಎರಡು ಅವರ ಇಪ್ಪತ್ತೈದನೇ ಜನ್ಮದಿನ.

ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡ ಅಜಿತ್ ತಮ್ಮ ಹೆಸರಿನಲ್ಲಿ ವೆಬ್‌ಸೈಟ್ ಸಹ ಆರಂಭಿಸಿದ್ದಾರೆ. ಅವರ ಜನ್ಮದಿನದ ಸಮಾರಂಭದಲ್ಲಿ ವೆಬ್‌ಸೈಟ್ www.patreajith.com ಅನ್ನು ಉದ್ಘಾಟಿಸಿದ್ದು ನಟಿ ತಾರಾ ಅನುರಾಧ.

`ಪಟ್ರೆ ಲವ್ಸ್ ಪದ್ಮ~ ಅಜಿತ್ ನಟಿಸಿದ ಮೊದಲ ಚಿತ್ರ. ಅದರಲ್ಲಿ ಹೆಸರು ಗಳಿಸಿದರೂ ಅಜಿತ್‌ಗೆ ನಂತರದ `ಗುಬ್ಬಿ~ ಯಶ ನೀಡಲಿಲ್ಲ. ಈಗ `ಈ ಭೂಮಿ ಆ ಬಾನು~ ಮತ್ತು `ಬೀಟ್~ ತೆರೆ ಕಾಣಲು ಸಿದ್ಧವಾಗಿವೆ.
 
ವೆಬ್‌ಸೈಟ್‌ನಲ್ಲಿ ತಾವು ನಟಿಸಿದ ಚಿತ್ರಗಳ ಟ್ರೇಲರ್, ಸ್ಟಿಲ್ಸ್‌ಗಳು, ಚಿತ್ರಗಳ ಮಾಹಿತಿಗಳನ್ನು ನೀಡಿರುವ ಅಜಿತ್ ಅದನ್ನು ಮತ್ತಷ್ಟು ಸುಧಾರಿಸಿ ಬೆಳೆಸುವ ಆಸೆ ವ್ಯಕ್ತಪಡಿಸಿದ್ದಾರೆ. 
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.