ADVERTISEMENT

ಬೊಂಬಾಟ್ ಬಾಲಿವುಡ್

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2011, 19:30 IST
Last Updated 27 ಅಕ್ಟೋಬರ್ 2011, 19:30 IST
ಬೊಂಬಾಟ್ ಬಾಲಿವುಡ್
ಬೊಂಬಾಟ್ ಬಾಲಿವುಡ್   

ದೀಪಿಕಾ ಪ್ರೇಮಕತೆ
`ರಣಬೀರ್ ಕಪೂರ್ ತನಗೆ ಕೈಕೊಟ್ಟ~ ಎಂದು ಹೇಳಿಕೊಂಡು ಸುತ್ತಿದ ದೀಪಿಕಾ ಪಡುಕೋಣೆ, ಅದಕ್ಕಿಂತ ಮೊದಲು ನಿಹಾರ್ ಪಾಂಡೆಗೆ ಕೈಕೊಟ್ಟಿದ್ದ ಸುದ್ದಿ ಹಲವರಿಗೆ ಗೊತ್ತಿಲ್ಲ. ಇದೀಗ ಅವಳ ಮೊದಲ ಪ್ರೇಮ ಪ್ರಕರಣವನ್ನು ಆಧರಿಸಿ ನಿರ್ದೇಶಕ ಪ್ರಶಾಂತ್ ಚಡ್ಡಾ ಸಿನಿಮಾ ನಿರ್ದೇಶಿಸಲು ನಿರ್ಧರಿಸಿದ್ದಾರೆ.

`ನಾನು ಮತ್ತು ನಿಹಾರ್ ಆತ್ಮೀಯ ಗೆಳೆಯರು. ದೀಪಿಕಾ ಅಭಿನಯ ಶಾಲೆಯಲ್ಲಿ ಕಲಿಯಲು ಬಂದಾಗ ನಿಹಾರ್ ಆಕೆಗೆ ಬಹಳ ಸಹಾಯ ಮಾಡಿದ್ದ. ತನ್ನ ಮನೆಯಲ್ಲಿ ಅವಳ ಕುಟುಂಬ ನೆಲೆಸಲು ಒಪ್ಪಿಗೆ ನೀಡಿದ್ದ. ಆಗ ನಾನು ಅವಳಿಗೆ ಮ್ಯೂಸಿಕ್ ವೀಡಿಯೋದಲ್ಲಿ ನಟಿಸಲು ಅವಕಾಶ ಕೊಡಿಸಿದ್ದೆ.
 
`ಓಂ ಶಾಂತಿ ಓಂ~ ಸಿನಿಮಾಗೆ ಮುಂಚೆ ದೀಪಿಕಾ ಅವನೊಟ್ಟಿಗೆ ಬದುಕು ಹಂಚಿಕೊಳ್ಳುವ ಮಾತನಾಡುತ್ತಿದ್ದಳು. ಆದರೆ ಸಿನಿಮಾ ಬಿಡುಗಡೆಯಾಗಿ ರಣಬೀರ್ ಜೊತೆ ಅವಳ ಗೆಳೆತನ ಕುದುರಿದ ನಂತರ ನಿಹಾರ್‌ನನ್ನು ಕಡೆಗಣಿಸತೊಡಗಿದಳು.
 
ರಣಬೀರ್ ಕೈಕೊಟ್ಟ ನಂತರ ಅಳುತ್ತಾ ಮತ್ತೆ ನಿಹಾರ್ ಬಳಿಗೆ ಬಂದಿದ್ದಳು. ಒಂದೆರಡು ದಿನದಲ್ಲೇ ಮತ್ತೆ ಯುವರಾಜ್ ಸಿಂಗ್ ಜೊತೆ ಸ್ನೇಹ ಬೆಳೆಸಿಕೊಳ್ಳತೊಡಗಿದಳು.

ಇದೀಗ ಸಿದ್ಧಾರ್ಥ್ ಮಲ್ಯನೊಂದಿಗೆ ಸುತ್ತುತ್ತಿದ್ದಾಳೆ. ಇಂಥ ಊಸರವಳ್ಳಿ ಹುಡುಗಿಯ ಬಗ್ಗೆ ಯಾವುದೇ ಅಡೆತಡೆ ಬಂದರೂ ಸಿನಿಮಾ ಮಾಡಿಯೇ ತೀರುತ್ತೇನೆ~ ಎಂದು ಪ್ರಶಾಂತ್ ಶಪಥ ಮಾಡುವ ರೀತಿಯಲ್ಲಿ ಮಾತನಾಡಿರುವುದು ದೀಪಿಕಾ ಮುಖದಲ್ಲಿ ಆತಂಕ ತರಿಸಿದೆಯಂತೆ.

ಅಮಿತಾಬ್ ಅನುಭವ
ಅಮಿತಾಬ್ ಬಚ್ಚನ್ ತಮ್ಮ ಮೊದಲ ಹಾಲಿವುಡ್ ಚಿತ್ರದ ಅನುಭವ ಮತ್ತು ನಟ ಲಿಯೋನಾರ್ಡೊ ಡಿ ಕ್ಯಾಪ್ರಿಯೊ ಜೊತೆಗಿನ ಒಡನಾಟವನ್ನು ಹಂಚಿಕೊಂಡಿದ್ದಾರೆ. ಅಮಿತಾಬ್ ಬಚ್ಚನ್ ಹಾಲಿವುಡ್‌ನ `ದಿ ಗ್ರೇಟ್ ಗಟ್ಸ್‌ಬಿ~ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
 
ಅದರಲ್ಲಿ ಹಾಲಿವುಡ್‌ನ ಘಟಾನುಘಟಿ ನಟರು ನಟಿಸುತ್ತಿದ್ದು, ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಚಿತ್ರೀಕರಣ ನಡೆಯುತ್ತಿದೆ. ವಿದೇಶಿ ನಟರೊಂದಿಗೆ ನಟಿಸುವ ಅನನ್ಯ ಅನುಭವ ತಮಗೆ ಸಿಕ್ಕಿರುವುದು ಅದೃಷ್ಟ.
 
ಅವರ ವೃತ್ತಿಪರತೆ, ಶಿಸ್ತು, ದಕ್ಷತೆಯನ್ನು ಹತ್ತಿರದಿಂದ ನೋಡಿ ತಿಳಿದುಕೊಳ್ಳುತ್ತಿದ್ದೇನೆ. ಇಂಥ ಸಮರ್ಥ ತಂಡದೊಂದಿಗೆ ನಟಿಸುತ್ತಿರುವುದನ್ನು ತಮ್ಮ ಪೂರ್ವಜನ್ಮದ ಪುಣ್ಯ ಎಂದೆಲ್ಲಾ ಬಚ್ಚನ್ ಬಣ್ಣಿಸುತ್ತಿದ್ದಾರೆ.

ಪ್ರೀತಿಯ ಫ್ರಾನ್ಸ್ ಕತೆ
ಪ್ರೀತಿ ಜಿಂಟಾ ತನ್ನ ನಿರ್ಮಾಣ ಸಂಸ್ಥೆಯಿಂದ ತಯಾರಿಸುತ್ತಿರುವ ಮೊದಲ ಸಿನಿಮಾ `ಇಷ್ಕ್ ಇನ್ ಪ್ಯಾರಿಸ್~. ಅದರಲ್ಲಿ ಪ್ರಸಿದ್ಧ ಫ್ರೆಂಚ್ ನಟನೊಂದಿಗೆ ನಟಿಸಲು ನಿರ್ಧರಿಸಿರುವ ಪ್ರೀತಿ, ನಟನ ಹೆಸರನ್ನು ಗುಟ್ಟಾಗಿರಿಸಿದ್ದಾಳೆ. ಪ್ರೇಮ್ ಸೋನಿ ಚಿತ್ರಕ್ಕೆ ಕತೆ ಬರೆದು ನಿರ್ದೇಶಿಸುತ್ತಿದ್ದಾರೆ.

ಇದರ ಮಧ್ಯದಲ್ಲೇ ಅಮೆರಿಕದ ಹುಡುಗ ಮತ್ತು ಫ್ರೆಂಚ್ ಹುಡುಗಿ ನಡುವಿನ ಪ್ರೇಮಕತೆ ಹೊಂದಿದ್ದ ಹಾಲಿವುಡ್‌ನ `ಬಿಫೋರ್ ಸನ್‌ರೈಸ್~ ಆಧರಿಸಿದ ಸಿನಿಮಾ ಇದು ಎಂಬ ಮಾತು ಕೇಳಿಬರುತ್ತಿದೆ. ಅದನ್ನು ತಳ್ಳಿಹಾಕಿರುವ ನಿರ್ದೇಶಕರು `ಚಿತ್ರ ಬಿಡುಗಡೆಯಾದ ನಂತರ ಕತೆ ಬಗ್ಗೆ ಚರ್ಚಿಸಿ.

ಅದಕ್ಕಿಂತ ಮುಂಚೆ ಊಹಿಸುವುದು ಯಾಕೆ?~ ಎಂದಿದ್ದಾರೆ. ಫ್ರಾನ್ಸ್ ದೇಶದಲ್ಲಿ ಇದುವರೆಗೂ ಯಾರೂ ಹೋಗದ ಜಾಗಗಳಲ್ಲಿ ಸಿನಿಮಾ ಚಿತ್ರೀಕರಣ ನಡೆಸಲು ನಿರ್ಧರಿಸಿರುವ ಪ್ರೀತಿ, ಅದಕ್ಕಾಗಿ ಫ್ರಾನ್ಸ್ ಸರ್ಕಾರದ ಒಪ್ಪಿಗೆ ಪಡೆದಿದ್ದಾಳಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.