ಹಣೆಯಿಂದ ಇಳಿದು ಕಣ್ಣನ್ನು ಮುದ್ದುಮಾಡುವಂತಿದ್ದ ಮುಂಗುರುಳನ್ನು ಆಗೀಗ ಹಿಂದೆ ಸರಿಸುತ್ತಿದ್ದ ರಾಗಿಣಿ ಫ್ರೆಂಚ್ ಗಡ್ಡಧಾರಿ ರಮೇಶ್ ಪಕ್ಕ ನಿಂತಿದ್ದರು. ಇಬ್ಬರ ಮುಖದಲ್ಲೂ ಹೈವೋಲ್ಟ್ ನಗು. ಅನತಿ ದೂರದಲ್ಲಿ ಮತ್ತೆ ಮೈಕೈ ತುಂಬಿಕೊಂಡಿರುವ ವಿಜಯ್ ರಾಘವೇಂದ್ರ. ಬಗಲಲ್ಲಿ ಅವರೊಟ್ಟಿಗೆ ಬಿಂದಾಸ್ ಬೀಚ್ ನರ್ತನ ಮಾಡಿದ ರಿಷಿಕಾ. `ಕಳ್ಳ ಮಳ್ಳ ಸುಳ್ಳ~ ಸಿನಿಮಾ 25 ದಿನ ಓಡಿದ ಸಂತೋಷ ಹಂಚಿಕೊಳ್ಳಲು ಏರ್ಪಾಟಾಗಿದ್ದ ಔತಣಕೂಟದಲ್ಲಿ ಎಲ್ಲರೂ ಆನಂದತುಂದಿಲರಾಗಿದ್ದರು.
ನಿರ್ಮಾಪಕ ಕೆ.ಮಂಜು ಸಂತೋಷಕ್ಕಂತೂ ಪಾರವೇ ಇರಲಿಲ್ಲ. ರಾಗಿಣಿ ಕುಣಿದಿರುವ ಎರಡು ಹಾಡುಗಳಿಗೆ ಪ್ರೇಕ್ಷಕರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದೇ ಇದಕ್ಕೆ ಕಾರಣವಂತೆ. ಉದಯ್ ಪ್ರಕಾಶ್ ನಿರ್ದೇಶನದ ಈ ರೀಮೇಕ್ ಚಿತ್ರ ಸಾಕಷ್ಟು ಸೋಲುಗಳನ್ನು ಕಂಡಿರುವ ಮಂಜು ಅವರ ವೃತ್ತಿಬದುಕಿನಲ್ಲಿ ಕೋಲ್ಮಿಂಚನ್ನು ಮೂಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.