ADVERTISEMENT

ರುದ್ರಾಕ್ಷಿಪುರದಲ್ಲಿ ವಜ್ರದ ಹುಡುಕಾಟ

​ಪ್ರಜಾವಾಣಿ ವಾರ್ತೆ
Published 7 ಜೂನ್ 2018, 19:30 IST
Last Updated 7 ಜೂನ್ 2018, 19:30 IST
ರೂಪಿಕಾ
ರೂಪಿಕಾ   

ವಜ್ರ ಅಮೂಲ್ಯ. ಅದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಆದರೆ, ಅಂಥದ್ದೊಂದು ವಜ್ರವನ್ನು ಹುಡುಕಲು ಹೊರಟವರಿಗೆ ಎದುರಾಗುವ ತೊಂದರೆಗಳನ್ನು ‘ರುದ್ರಾಕ್ಷಿಪುರ’ ಸಿನಿಮಾ ಕಥೆಯ ರೂಪದಲ್ಲಿ ಹೇಳುತ್ತದೆ. ಈ ಚಿತ್ರದ ಹೆಸರು ಒಂದು ಊರನ್ನು ಸೂಚಿಸುತ್ತದೆ. ಈ ಊರು ಕಾಲ್ಪನಿಕ.

ಈ ಚಿತ್ರದಲ್ಲಿ ನಾಯಕನು ಕಳ್ಳರ ಗುಂಪನ್ನು ಸೇರಿಕೊಳ್ಳುತ್ತಾನೆ. ಆತ ಏಕೆ ಅದನ್ನು ಸೇರಿಕೊಳ್ಳುತ್ತಾನೆ, ನಾಯಕಿಗೂ ವಜ್ರಕ್ಕೂ ಏನು ಸಂಬಂಧ ಎಂಬುದನ್ನು ಚಿತ್ರ ನೋಡಿ ತಿಳಿದುಕೊಳ್ಳಬೇಕು. ಗುಬ್ಬಿ, ಬೆಂಗಳೂರು ಮತ್ತು ಉಡುಪಿಯಲ್ಲಿ ಇದರ ಚಿತ್ರೀಕರಣ ನಡೆದಿದೆ ಎಂದು ತಂಡ ಹೇಳಿಕೊಂಡಿದೆ. ಪವನ್ ಪಾರ್ಥ ಅವರು ಚಿತ್ರದ ಹಾಡುಗಳಿಗೆ ಸಂಗೀತ ನೀಡಿದ್ದಾರೆ.

ಅರ್ಜುನ್‍ ಚೌಹಣ್ ಅವರು ನಾಯಕ, ರೂಪಿಕಾ ಅವರು ನಾಯಕಿ. ರೂಪಿಕಾ ಅವರು ಡಾನ್ಸರ್. ರವಿಚೇತನ್ ಅವರು ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಕತೆ, ಚಿತ್ರಕತೆ ಹಾಗೂ ನಿರ್ದೇಶನದ ಹೊಣೆ ಈಶ್ವರ್‍ ಪೊಲಂಕಿ ಅವರದ್ದು. ಛಾಯಾಗ್ರಹಣ ಸುದೀಪ್‍ ಫ್ರೆಡ್ರಿಕ್. ನಾಗರಾಜ ಮುರ್ಡೇಶ್ವರ ಇದರ ನಿರ್ಮಾಣ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.