ADVERTISEMENT

ಶ್ರದ್ಧಾ ಸಂಭಾವನೆ ₹7 ಕೋಟಿ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2019, 19:45 IST
Last Updated 7 ಆಗಸ್ಟ್ 2019, 19:45 IST
.
.   

ಆಗಸ್ಟ್‌ 30ರಂದು ಬಿಡುಗಡೆಯಾಗಲಿರುವ ‘ಸಾಹೋ’ ಚಿತ್ರದಲ್ಲಿ ನಟಿಸಿರುವ ನಟ ಪ್ರಭಾಸ್‌ ಹಾಗೂ ನಟಿ ಶ್ರದ್ಧಾ ಕಪೂರ್‌ ಹೆಸರು ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟ– ನಟಿಯರ ಸಾಲಿನಲ್ಲಿ ಶೀಘ್ರವೇ ಸೇರ್ಪಡೆಯಾಗಲಿದೆ.

ಪ್ರಭಾಸ್ ಜೊತೆ ಮೊದಲ ಬಾರಿ ನಟಿಸಿರುವ ಬಾಲಿವುಡ್‌ ನಟಿ ಶ್ರದ್ಧಾ ಕಪೂರ್ ‘ಸಾಹೊ’ ಸಿನಿಮಾಕ್ಕಾಗಿ ಈಗಾಗಲೇ ₹ 7 ಕೋಟಿ ಸಂಭಾವನೆ ಪಡೆದುಕೊಂಡಿದ್ದಾರೆ.

ಈ ಸಿನಿಮಾ ಬಿಡುಗಡೆ ಬಳಿಕ ಎರಡನೇ ಹಂತದಲ್ಲಿ ಶ್ರದ್ಧಾ ಪಡೆದುಕೊಳ್ಳಲಿರುವ ಸಂಭಾವನೆ ಎಷ್ಟಿರಬಹುದು ಎಂಬ ಬಗ್ಗೆ ಈಗಾಗಲೇ ಕುತೂಹಲ ಹೆಚ್ಚಿದೆ.ಪ್ರಭಾಸ್‌ ಸಹ ಈ ಚಿತ್ರದಲ್ಲಿ ದುಬಾರಿ ಸಂಭಾವನೆ ಪಡೆದುಕೊಂಡಿದ್ದಾರೆ ಎಂದು ಗಾಳಿ ಸುದ್ದಿ ಇದೆ.ಚಿತ್ರದ ಬಿಡುಗಡೆಗೂ ಮುಂಚೆ ನಡೆಯುವ ವ್ಯವಹಾರದ ಶೇ.50ರಷ್ಟು ಮೊತ್ತವನ್ನು ಪ್ರಭಾಸ್‌ ತೆಗೆದುಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ.

ADVERTISEMENT

ಚಿತ್ರ ಬಿಡುಗಡೆಗೂ ಮೊದಲು ಅವರ ಲುಕ್‌ಗಾಗಿ ಸಿನಿಮಾ ತಂಡ ಸಾಕಷ್ಟು ಹಣ ಖರ್ಚು ಮಾಡಿದೆಯಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.