ADVERTISEMENT

ಸದ್ಯಕ್ಕೆ ಹಾಸ್ಯ ಪಾತ್ರ ಸಾಕು

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2012, 19:30 IST
Last Updated 15 ಮಾರ್ಚ್ 2012, 19:30 IST

ಏಳು ವರ್ಷಗಳಿಂದ ಹಾಸ್ಯ ಪಾತ್ರ ಮಾಡುತ್ತಿದ್ದೇನೆ. ಸಾಕೆನಿಸಿದೆ. ಏಕತಾನದ ಅನುಭವ. ಈ ಇಮೇಜ್‌ನಿಂದ ಹೊರ ಬರಬೇಕಿದೆ. ಸದ್ಯಕ್ಕೆ ಹಾಸ್ಯ ಪಾತ್ರಗಳು ಸಾಕು... ಹೀಗೆ ಅಕ್ಷಯ್ ಕುಮಾರ್ ಹೇಳುತ್ತಿದ್ದಾರೆ.

`ಹೌಸ್ ಫುಲ್ 2~ ಚಿತ್ರ ಬಿಡುಗಡೆಯ ನಂತರ ಹಾಸ್ಯ ಪಾತ್ರಗಳಿಗೆ ಬ್ರೇಕ್ ನೀಡುವುದಾಗಿ ಅಕ್ಷಯ್ ಕುಮಾರ್ ನವದೆಹಲಿಯಲ್ಲಿ ಘೋಷಿಸಿದ್ದಾರೆ. ಸದ್ಯ ನೀರಜ್ ಪಾಂಡೆಯ `ಸ್ಪೇಷಲ್ ಛಬ್ಬೀಸ್~ ಚಿತ್ರೀಕರಣದಲ್ಲಿ ನಿರತರಾಗಿರುವ ಅಕ್ಷಯ್ ತಮ್ಮ ಕೆರಿಯರ್ ಅನ್ನು ಆ್ಯಕ್ಷನ್ ಚಿತ್ರಗಳಿಂದಲೇ ಆರಂಭಿಸಿದ್ದರು. ಮರಳಿ ಆ್ಯಕ್ಷನ್ ಚಿತ್ರ ಮಾಡಲು ಹಪಹಪಿಸುತ್ತಿರುವುದಾಗಿ ತಿಳಿಸಿದ್ದಾರೆ.
 
`ಕಿಲಾಡಿ~, `ಕಿಲಾಡಿಯೊಂಕೆ ಕಿಲಾಡಿ~, `ಮೊಹ್ರಾ~ದಂಥ ಚಿತ್ರಗಳಲ್ಲಿ ನಟಿಸಿದ ನಂತರವೇ ನಾಯಕನಟನಾಗಿ ಹೆಸರುಗಳಿಸಿದ್ದು. ಆದರೆ ಕಳೆದ  ಏಳು ವರ್ಷಗಳಿಂದ ಆ್ಯಕ್ಷನ್ ಚಿತ್ರದಲ್ಲಿ ನಟಿಸಲು ಕಾಯುತ್ತಿದ್ದೇನೆ. ಸಾಕಷ್ಟು ಕಾಮಿಡಿ ಚಿತ್ರಗಳಾಗಿವೆ. ನನಗೂ ಈಗ ಕಾಮಿಡಿ ಚಿತ್ರಗಳಲ್ಲಿ ನಟಿಸಲು ಬೇಸರವಾಗಿದೆ. ಒಂದು ಸಂಪೂರ್ಣ ಆ್ಯಕ್ಷನ್‌ಮಯ ಚಿತ್ರ ಮಾಡಬೇಕೆಂದು ಕಾತರದಿಂದ ಕಾಯುತ್ತಿದ್ದೇನೆ.

`ಹೌಸ್‌ಫುಲ್ 2~ ಚಿತ್ರದ ನಂತರ `ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ 2~ ಹಾಗೂ `ಜೋಕರ್~ ಚಿತ್ರಗಳು ಬಿಡುಗಡೆಯಾಗಲಿವೆ. ಇವು ಆ್ಯಕ್ಷನ್ ಚಿತ್ರಗಳು. ಇಂಥವೇ ಚಿತ್ರಗಳಲ್ಲಿ ಮತ್ತೆ ಕಾಣಿಸಿಕೊಳ್ಳಲು ಇಷ್ಟಪಡುತ್ತೇನೆ ಎಂದು ಅಕ್ಷಯ್ ಕುಮಾರ್ ಹೇಳಿಕೊಂಡಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.