ADVERTISEMENT

ಸಿನಿರುಚಿ ತೋರುವ 'ಗೌಡ್ರು ಹೋಟೆಲ್'

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2017, 10:00 IST
Last Updated 15 ಸೆಪ್ಟೆಂಬರ್ 2017, 10:00 IST
ಸಿನಿರುಚಿ ತೋರುವ 'ಗೌಡ್ರು ಹೋಟೆಲ್'
ಸಿನಿರುಚಿ ತೋರುವ 'ಗೌಡ್ರು ಹೋಟೆಲ್'   

ಬೆಂಗಳೂರು: ‘ಹಿಟ್ಟಂ ಬಿಟ್ಟಂ ಕೆಟ್ಟಂ’ ಹೀಗೆನ್ನುತ್ತಾ ತೆರೆಯ ಮೇಲೆ ಸಿನಿರುಚಿ ತೋರಿಸಲು ಬರುತ್ತಿದೆ ‘ಗೌಡ್ರು ಹೋಟೆಲ್’. ಸಿನಿಮಾದ ಟ್ರೇಲರ್‌ ಯುಟ್ಯೂಬ್‌ಗೆ ಅಪ್‌ಲೋಡ್ (ಸೆ.14) ಆದ ಒಂದೇ ದಿನಲ್ಲಿ ಸುಮಾರು 4 ಲಕ್ಷ ವ್ಯೂ ಪಡೆದಿದೆ.

ಗೌಡ್ರು ಪಾತ್ರಕ್ಕೆ ಪ್ರಕಾಶ್‌ ರೈ ಜೀವ ತುಂಬಿದ್ದಾರೆ. ನಾಯಕನಾಗಿ ರಚನ್ ಚಂದ್ರ, ನಾಯಕಿಯಾಗಿ ವೇದಿಕಾ ನೆನಪಿನಲ್ಲಿ ಉಳಿಯುತ್ತಾರೆ.

ಟ್ರೇಲರ್‌ ನೋಡುತ್ತಿದ್ದಂತೆಯೇ ಮಲಯಾಳಂ ‘ಉಸ್ತಾದ್ ಹೋಟೆಲ್’ ಸಿನಿಮಾ ನೆನಪಾಗುತ್ತದೆ. ಆ ಸಿನಿಮಾದಲ್ಲಿ ದುಲ್ಕರ್ ಮಲಬಾರ್ ಪರೋಟ ತಟ್ಟಲು ಹೆಣಗಾಡಿದರೆ, ‘ಗೌಡ್ರು ಹೋಟೆಲ್’ ಸಿನಿಮಾದಲ್ಲಿ ರಚನ್ ಚಂದ್ರ ಮುದ್ದೆ ತಿರುವಲು ಯತ್ನಿಸಿ, ರಟ್ಟೆಯ ಶಕ್ತಿ ಕಳೆದುಕೊಂಡು ಉಸ್ಸಪ್ಪ ಎಂದಿದ್ದಾರೆ.

ADVERTISEMENT

ರಚನ್ ಚಂದ್ರ ಹೋಟೆಲ್‌ ಮ್ಯಾನೆಜ್‌ಮೆಂಟ್‌ ಮಾಡಿ ತನ್ನ ಹಳ್ಳಿ ವಾಪಸ್ಸು ಬರುತ್ತಾನೆ. ಅಡುಗೆ ಮಾಡುವವನು ಎಂದು ಸಂಬಂಧಿಕರು ಗೆಳೆಯರು ಗೇಲಿ ಮಾಡುತ್ತಾರೆ. ಮದುವೆಯಾಗಬೇಕಾದ ಹುಡುಗಿಯೂ ಈತನ ಉದ್ಯೋಗ ಕೇಳಿ ಹೀಯಾಳಿಸುತ್ತಾಳೆ. ಕೊನೆಗೆ ‘ಗೌಡ್ರು ಹೋಟೆಲ್‌’ಗೆ ಕೆಲಸಕ್ಕೆ ಸೇರುತ್ತಾನೆ. ವಿದೇಶಿ ಅಡುಗೆ ಕಲಿತು ಬಂದು ನಾಯಕನಿಗೆ ಮೊದಲು ಮುದ್ದೆ ಮಾಡುವುದನ್ನು ಕಲಿಸುತ್ತಾರೆ ಪ್ರಕಾಶ್‌ ರೈ. ಟ್ರೇಲರ್‌ನಲ್ಲಿ ಇಷ್ಟು ಕಥೆಯನ್ನು ಬಿಚ್ಚಿಟ್ಟಿದ್ದಾರೆ ನಿರ್ದೇಶಕ ಪಿ.ಕುಮಾರ್.

ಪ್ರಕಾಶ್‌ ರೈ ಮಾತಿನಲ್ಲಿ ಮಂಡ್ಯ ಸೀಮೆಯ ಕನ್ನಡದ ಸೊಗಡು ಇದೆ. ನಾಯಕ ರಚನ್ ಚಂದ್ರ ನಕ್ಕರೆ ಮುದ್ದಾಗಿ ಕಾಣ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.