ADVERTISEMENT

ಸಿಹಿಕಹಿ ಭೋಜನ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2011, 19:30 IST
Last Updated 31 ಮಾರ್ಚ್ 2011, 19:30 IST
ಸಿಹಿಕಹಿ ಭೋಜನ
ಸಿಹಿಕಹಿ ಭೋಜನ   

ಸಿಹಿಕಹಿ ಚಂದ್ರು ನೇತೃತ್ವದ ‘ಬೊಂಬಾಟ್ ಭೋಜನ’ ಕಾರ್ಯಕ್ರಮ 300 ಕಂತು ಪೂರೈಸಿ ದಾಖಲೆ ನಿರ್ಮಿಸಿದೆಯಂತೆ. ಇದೇ ಸಂದರ್ಭದಲ್ಲಿ ಸಂಚಿಕೆಯಲ್ಲಿ ಬಂದ ರೆಸಿಪಿಗಳ ಪುಸ್ತಕ ಮತ್ತು ವೆಬ್‌ಸೈಟ್ ಅನ್ನು ಆರಂಭಿಸಲಾಗಿದೆ.

ಸುವರ್ಣ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರವರೆಗೆ ಮಧ್ಯಾಹ್ನ 1 ಗಂಟೆಗೆ ಪ್ರಸಾರವಾಗುವ ಈ ಕಾರ್ಯಕ್ರಮದ ನಿರೂಪಕ ಚಂದ್ರು ಮಾತನಾಡಿ, ಸಸ್ಯಹಾರಿಯಾದ ನಾನು ಚೈನೀಸ್ ಮತ್ತು ಇಟಾಲಿಯನ್ ಅಡುಗೆಗಳನ್ನು ಪ್ರಯತ್ನಿಸಿದ್ದೇನೆ. 125 ಅಡುಗೆಗಳ ಬಗ್ಗೆ ಮಾಹಿತಿ ಈ ಪುಸ್ತಕದಲ್ಲಿದೆ. ಇದು ಪುಸ್ತಕದಂಗಡಿಯಲ್ಲಿ ಸಿಗುವುದಿಲ್ಲ, ಕೇವಲ ಹೋಟೆಲ್‌ಗಳಲ್ಲಿ ಸಿಗಲಿದೆ’ ಎಂದು ಮಾಹಿತಿ ನೀಡಿದರು. ನಟಿ ಸುಂದರಶ್ರೀ ಪುಸ್ತಕ ಬಿಡುಗಡೆ ಮಾಡಿದರೆ ಎಂ.ಎಸ್.ನರಸಿಂಹ ಮೂರ್ತಿ ವೆಬ್‌ಸೈಟ್‌ಗೆ ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ಸಿಹಿಕಹಿ ಗೀತಾ ನೇತೃತ್ವದಲ್ಲಿ ಏಪ್ರಿಲ್ ಒಂದರಿಂದ ಆರಂಭವಾಗುವ ಹೊಸ ಟಾಕ್‌ಶೋ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಲಾಯಿತು. ಬಾಲ್ಯದಿಂದ ಮುಪ್ಪಿನವರೆಗೂ ಹೆಣ್ಣು ಅನುಭವಿಸುವ ಸಂಕಟಗಳಿಗೆ ಈ ಕಾರ್ಯಕ್ರಮ ವೇದಿಕೆ ಒದಗಿಸಲಿದೆಯಂತೆ. ಇಲ್ಲಿ ಹೆಣ್ಣುಮಕ್ಕಳು ತಮ್ಮ ಸಮಸ್ಯೆ ಮತ್ತು ಅನುಭವಗಳನ್ನು ಹಂಚಿಕೊಂಡು ಪರಿಹಾರ ಕಂಡುಕೊಳ್ಳಬಹುದು. ತಜ್ಞತಂಡ ಕಾರ್ಯಕ್ರಮದಲ್ಲಿ ಹಾಜರಿರಲಿದೆ ಎಂದು ಗೀತಾ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.