ADVERTISEMENT

ಹಲವರ ಸ್ಫೂರ್ತಿ ಅಭಿನೇತ್ರಿ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2013, 19:59 IST
Last Updated 5 ಸೆಪ್ಟೆಂಬರ್ 2013, 19:59 IST

ಟಿ ಪೂಜಾ ಗಾಂಧಿ ಮತ್ತು ನಿರ್ದೇಶಕ ಸತೀಶ್ ಬಿ. ಪ್ರಧಾನ್ ಭಾರಿ ಖುಷಿಯಲ್ಲಿದ್ದರು. ಆ ಸಂತಸಕ್ಕೆ ಮೂಲ ‘ಅಭಿನೇತ್ರಿ’. ‘ಅಭಿನೇತ್ರಿ’ ಚಿತ್ರದ ಮೂಲಕ ಪೂಜಾ ಗಾಂಧಿ ಮೊದಲ ಬಾರಿಗೆ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಸತೀಶ್ ಅವರಿಗಿದು ನಿರ್ದೇಶನದ ಚೊಚ್ಚಿಲ ಅನುಭವ.

ಈ ಚಿತ್ರ ತಮ್ಮ ವೃತ್ತಿ ಬದುಕಿಗೆ ಹೊಸ ಮುನು್ನಡಿಯಾಗಲಿದೆ ಎನ್ನುವ ಆಶಾವಾದ ಇಬ್ಬರದ್ದು. ಹಲವು ವರ್ಷಗಳ ಕಾಲ ಸಹಾಯಕ ಮತ್ತು ಸಹ ನಿರ್ದೇಶಕರಾಗಿ ದುಡಿದ ಅನುಭವ ಸತೀಶ್ ಅವರದು. ಈ ಮೊದಲು ಪೂಜಾ ಅವರ ಚಿತ್ರವೊಂದರ ಅವಕಾಶ ದೊರೆತರೂ, ಆ ಚಿತ್ರ ಪೂರ್ಣವಾಗಲೇ ಇಲ್ಲ.

‘ಈಗ ಮತ್ತೆ ಕಾಲ ಕೂಡಿದೆ. ‘ಅಭಿನೇತ್ರಿ’ಯ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕನಾಗುತ್ತಿದ್ದೇನೆ’ ಎನ್ನುತ್ತ ಪೂಜಾ ಜೊತೆಯ ಹಳೆಯ ಚಿತ್ರ ಸಂಬಂಧವನ್ನು ಅವರು ನೆನಪಿಸಿಕೊಂಡರು. ನಟಿಯರ ಜೀವನದ ಜರ್ನಿಯೇ ‘ಅಭಿನೇತ್ರಿ’ ಚಿತ್ರಕಥೆಯ ಸಾರ. ಚಿತ್ರದಲ್ಲಿ ಬಹು ಮಂದಿ ನಟಿಯರ ಬದುಕು– ಬವಣೆ ಹಾದು ಕಾಣಿಸಿಕೊಳ್ಳಲಿದೆ ಎಂದರು.

‘ಅಭಿನೇತ್ರಿ’ಗೆ ಮಾತ್ರ ಚಿತ್ರ ನಿರ್ಮಾಣವನ್ನು ಸೀಮಿತಗೊಳಿ­ಸುವುದಿಲ್ಲ ಎಂದು ಪೂಜಾ ಗಾಂಧಿ ಸ್ಪಷ್ಟಪಡಿಸಿದರು. ಅನೇಕ ಹಿರಿಯ ನಟಿಯರ ಬದುಕಿನ ಸ್ಫೂರ್ತಿಯಿಂದ ಈ ಚಿತ್ರ ರೂಪಿಸುತ್ತಿರುವುದಾಗಿ ಹೇಳಿದರು. ‘ನನ್ನದು ಚಿತ್ರದಲ್ಲಿ ಒಳ್ಳೆಯ ಪಾತ್ರ’ ಎಂದು ಮಾತಿನ ಆರಂಭದಲ್ಲಿಯೇ ಹೇಳಿದರು, ನಟ ಮಕರಂದ ದೇಶಪಾಂಡೆ. ‘ದಂಡುಪಾಳ್ಯ’ದ ಗುಂಪಿನಲ್ಲಿದ್ದ ತಮ್ಮನ್ನು ಚಿತ್ರರಂಗ ಉತ್ತಮವಾಗಿ ಗುರುತಿಸಿದೆ ಎನ್ನುವುದು ಅವರ ಖುಷಿ.

ಚಿತ್ರದ ನಿರ್ಮಾಣದಲ್ಲಿ ಕೈ ಜೋಡಿಸಿರುವ ವೈಜಯಂತಿ ಎಂಜಿನಿಯರಿಂಗ್ ಪದವೀಧರೆ. ‘ಪೂಜಾ ನನ್ನ ಬಹುದಿನಗಳ ಗೆಳತಿ. ಅವರ ಜೊತೆ ಮುಂದೆಯೂ ಚಿತ್ರ ನಿರ್ಮಾಣದಲ್ಲಿ ತೊಡಗುವೆ’ ಎಂದ ಅವರಿಗೆ ‘ಅಭಿನೇತ್ರಿ’ ಗೆಲ್ಲುವ ವಿಶ್ವಾಸವಿದೆ. 2014ರ ಜನವರಿಯಲ್ಲಿ ಚಿತ್ರವನ್ನು ತೆರೆಕಾಣಿಸುವ ಯೋಚನೆ ಚಿತ್ರತಂಡದ್ದು. 5 ಹಾಡುಗಳಿದ್ದು ಸಮಕಾಲೀನ ಭಾವಗಳ ಸ್ಪರ್ಶದ ಮಟ್ಟುಗಳಿರುತ್ತವೆಯಂತೆ. ಸಂಗೀತ ನಿರ್ದೇಶಕ ಮನೋಮೂರ್ತಿ, ಛಾಯಾಗಾ್ರಹಕ ಚಂದ್ರಶೇಖರ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.