ADVERTISEMENT

‘ಪತ್ರಲೇಖಾ’ಗೆ ವಿದ್ಯಾ ಪ್ರೇರಣೆ

​ಪ್ರಜಾವಾಣಿ ವಾರ್ತೆ
Published 28 ಮೇ 2014, 19:30 IST
Last Updated 28 ಮೇ 2014, 19:30 IST
ವಿದ್ಯಾಬಾಲನ್‌
ವಿದ್ಯಾಬಾಲನ್‌   

‘ಸಿಟಿಲೈಟ್ಸ್‌’ ಎಂಬ ಬಿಡುಗಡೆಯಾಗಬೇಕಿರುವ ಸಿನಿಮಾದ ನಾಯಕಿ ಪತ್ರಲೇಖಾ ಅವರಿಗೆ ವಿದ್ಯಾ ಎಂದರೆ ಅಚ್ಚುಮೆಚ್ಚಂತೆ. ‘ಪ್ರಣೀತಾ’ ಚಿತ್ರ ನೋಡಿದ ನಂತರ ವಿದ್ಯಾ ಅವರ ಪ್ರತಿಯೊಂದು ನಡೆ, ನುಡಿ ಹಾಗೂ ನಟನೆಯನ್ನು ಅತಿ ಸೂಕ್ಷ್ಮವಾಗಿ ಗಮಿಸುತ್ತಾ ಬಂದ ಈ ನಟಿಗೆ ಸ್ಫೂರ್ತಿ ವಿದ್ಯಾ ಬಾಲನ್‌ ಎಂದು ಸ್ವತಃ ಪತ್ರಲೇಖಾ ಅವರು ತಿಳಿಸಿದ್ದಾರೆ.

ತಮ್ಮ ‘ಸಿಟಿಲೈಟ್ಸ್‌’ ಚಿತ್ರದ ಪ್ರೀಮಿಯರ್‌ ಪ್ರದರ್ಶನದ ವೇಳೆ ಮಾತನಾಡಿದ ಪತ್ರಲೇಖಾ, ‘ನಾನು ವಿದ್ಯಾ ಅವರಂತೆ ನಟಿ ಮಾತ್ರವಲ್ಲ, ಬದಲಿಗೆ ಅವರಂಥ ವ್ಯಕ್ತಿತ್ವವನ್ನೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದಿದ್ದೇನೆ’ ಎಂದಿದ್ದಾರೆ. ತಮ್ಮ ಪತಿಯೊಡನೆ ಸಿಟಿಲೈಟ್ಸ್ ಚಿತ್ರ ವೀಕ್ಷಿಸಿದ ನಟಿ ವಿದ್ಯಾ ಅವರು ಪತ್ರಲೇಖ ನಟನೆಯನ್ನು ಮುಕ್ತಕಂಠದಿಂದ ಹೊಗಳಿದ್ದಾರಂತೆ. ಇದರಿಂದ ಪತ್ರಲೇಖ ಇನ್ನಷ್ಟು ಖುಷಿಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.