ADVERTISEMENT

ಇದೋ ಬಂತು ‘13’ ಚಿತ್ರದ ‘ಸಿಂಗಲ್ ಸೇವಂತಿ’ ಐಟಂ ಸಾಂಗ್

ರಾಘವೇಂದ್ರ ರಾಜ್‌ಕುಮಾರ್, ಶ್ರುತಿ ಮುಖ್ಯಭೂಮಿಕೆಯಲ್ಲಿರುವ ‘13’ ಚಿತ್ರ

​ಪ್ರಜಾವಾಣಿ ವಾರ್ತೆ
Published 10 ಜುಲೈ 2023, 17:33 IST
Last Updated 10 ಜುಲೈ 2023, 17:33 IST
ಶ್ರುತಿ, ರಾಘವೇಂದ್ರ ರಾಜ್‌ಕುಮಾರ್‌
ಶ್ರುತಿ, ರಾಘವೇಂದ್ರ ರಾಜ್‌ಕುಮಾರ್‌   

ರಾಘವೇಂದ್ರ ರಾಜ್‌ಕುಮಾರ್, ಶ್ರುತಿ ಮುಖ್ಯಭೂಮಿಕೆಯಲ್ಲಿರುವ ‘13’ ಚಿತ್ರದ ‘ಸಿಂಗಲ್ ಸೇವಂತಿ’ ಎಂಬ ಐಟಂ ಸಾಂಗ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಈ ಹಿಂದೆ ‘ಪಲ್ಲಕ್ಕಿ’ ಸಿನಿಮಾ ನಿರ್ದೇಶನ ಮಾಡಿದ್ದ ಕೆ.ನರೇಂದ್ರ ಬಾಬು ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್‌–ಕಟ್‌ ಹೇಳಿದ್ದಾರೆ. 

‘ಈ ಚಿತ್ರದ ಕಥೆ, ಶೀರ್ಷಿಕೆ ನನಗೆ ತುಂಬಾ ಖುಷಿ ಕೊಟ್ಟಿದೆ. ಕುತೂಹಲ ಹೊಂದಿರುವ ಚಿತ್ರವಾಗಿದ್ದು, ಚಿತ್ರೀಕರಣದ ಅನುಭವ ಭಿನ್ನವಾಗಿತ್ತು. 25 ವರ್ಷಗಳ ನಂತರ ಶ್ರುತಿ ಅವರ ಜೊತೆ ನಟಿಸಿದ್ದೇನೆ’ ಎಂದು ರಾಘವೇಂದ್ರ ರಾಜ್‌ಕುಮಾರ್‌ ಹೇಳಿದರು.

‘ಭಾವೈಕ್ಯದ ಸಾಮಾಜಿಕ ಸಂದೇಶವಿರುವ ಕಥೆ. ಮನರಂಜನೆಯ ಜೊತೆಗೆ ಸಸ್ಪೆನ್ಸ್, ಥ್ರಿಲ್ಲರ್ ಅಂಶಗಳಿವೆ. ರಾಘವೇಂದ್ರ ರಾಜ್‌ಕುಮಾರ್‌ ಅವರು ಮೋಹನ್‌ ಎಂಬ ಪಾತ್ರ ಮಾಡಿದ್ದು, ಶ್ರುತಿ ಮುಸ್ಲಿಂ ಮಹಿಳೆಯಾಗಿ ಕಾಣಿಸಿಕೊಂಡಿದ್ದಾರೆ. ಐಟಂ ಸಾಂಗ್‌ಗೆ ರಾಘವೇಂದ್ರ ರಾಜ್‌ಕುಮಾರ್‌ ಕೂಡ ಹೆಜ್ಜೆ ಹಾಕಿರುವುದು ವಿಶೇಷ’ ಎಂದರು ಕೆ.ನರೇಂದ್ರ ಬಾಬು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.