ADVERTISEMENT

ಸಿನಿಮಾ ಪ್ರಚಾರಕ್ಕೆ ಹೊಸ ತಂತ್ರ

​ಪ್ರಜಾವಾಣಿ ವಾರ್ತೆ
Published 9 ಜನವರಿ 2018, 19:30 IST
Last Updated 9 ಜನವರಿ 2018, 19:30 IST
ದಾನೀಶ್‌ ಸೇಠ್‌
ದಾನೀಶ್‌ ಸೇಠ್‌   

ವೇದಿಕೆ, ಗಿಜಿಗುಡುವ ಜನರ ಮುಂದೆ, ಟಿ.ವಿ.ಗಳಲ್ಲಿ, ದೊಡ್ಡದೊಡ್ಡ ಕಾರ್ಯಕ್ರಮ ಆಯೋಜಿಸಿ ಸಿನಿಮಾ ಪ್ರಚಾರ ಮಾಡುವುದು ಮಾಮೂಲಿ. ಆದರೆ ಸದ್ಯದಲ್ಲಿಯೇ ತೆರೆ ಕಾಣಲು ತಯಾರಾಗಿರುವ ‘ಹಂಬಲ್‌ ಪೊಲಿಟಿಷಿಯನ್‌ ನಾಗರಾಜ್‌’ ಮನೆಮನೆಗೆ ತೆರಳಿ ಸಿನಿಮಾ ನೋಡುವಂತೆ ರಾಜಕಾರಣಿಯ ರೀತಿಯಲ್ಲಿಯೇ ಜನರನ್ನು ಕೇಳಿಕೊಳ್ಳುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳು ಸಿನಿಮಾ ಮತ್ತು ರಾಜಕೀಯ ಪಕ್ಷಗಳ ಪ್ರಚಾರದ ಪ್ರಬಲ ಅಸ್ತ್ರವಾಗಿದೆ. ಇದನ್ನು ಇನ್ನಷ್ಟು ವಿಭಿನ್ನವಾಗಿ ಬಳಸಿಕೊಂಡಿದ್ದಾರೆ ಸಿನಿಮಾದ ನಾಯಕ ದಾನೀಶ್‌ ಸೇಠ್‌. ಬೀದಿಗಳಲ್ಲಿ ಮಾಡುತ್ತಿರುವ ಪ್ರಚಾರದ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿಯೂ ಹರಿಬಿಟ್ಟಿದ್ದಾರೆ. ‘ನಿಮ್ಮ ಏರಿಯಾಗೂ ಬರಬೇಕೆಂದರೆ ಕಾಮೆಂಟ್‌ ಮಾಡಿ’ ಎಂಬ ಅವಕಾಶವನ್ನೂ ವೀಕ್ಷಕರಿಗೆ ನೀಡಿದ್ದಾರೆ.

‘ಅನುಭವಗಳ ಮೂಲಕ ಕ್ರಿಯಾತ್ಮಕ ಯೋಚನೆ ಹೊಳೆಯುತ್ತವೆ. ಇದು ಕೂಡ ಅದರ ಒಂದು ಭಾಗ. ನಾವು ಸಿನಿಮಾ ಥೀಮ್‌ ಬಿಟ್ಟು ಪ್ರಚಾರ ಮಾಡುತ್ತಿಲ್ಲ. ಸಿನಿಮಾದ ಕಥೆಯಲ್ಲಿ ಇರುವ ಅಂಶಗಳನ್ನು ಪ್ರಚಾರಕ್ಕೆ ಬಳಸಿದ್ದೇವೆ. ಈ ವಿಡಿಯೊ ವೈರಲ್‌ ಆಗುತ್ತದೆ ಎಂಬುದು ಗೊತ್ತಿತ್ತು. ಆದರೆ ಇಷ್ಟು ಜನಪ್ರಿಯವಾಗುತ್ತದೆ ಎಂಬ ಆಲೋಚನೆ ಇರಲಿಲ್ಲ’ ಎನ್ನುತ್ತಾರೆ ದಾನೀಶ್‌ ಸೇಠ್‌.

ADVERTISEMENT

ನಗರದ ವಿವಿಧೆಡೆ ಇರುವ 38 ಕಾಲೇಜುಗಳು, ಹಲಸೂರು ಮತ್ತು ನಗರದ ಹೊರವಲಯಗಳಲ್ಲಿ ಪ್ರಚಾರ ಮಾಡಿದ್ದಾರೆ. ಈ ವಿಡಿಯೊವನ್ನು 15 ಲಕ್ಷ ಮಂದಿ ವೀಕ್ಷಿಸಿದ್ದಾರೆ. ಅಂದಹಾಗೆ ಈ ಸಿನಿಮಾ ಇದೇ ಶುಕ್ರವಾರ ತೆರೆಗೆ ಬರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.