ADVERTISEMENT

ಫೇಸ್‌ಬುಕ್‌ ಪುಟದಲ್ಲಿ ‘ಪದ್ಮಾವತ್‌’ ಚಿತ್ರ ಸೋರಿಕೆ: ಲೈವ್‌ ಸ್ಟ್ರೀಮ್‌ನಲ್ಲಿ ಪೂರ್ಣ ಸಿನಿಮಾ

​ಪ್ರಜಾವಾಣಿ ವಾರ್ತೆ
Published 25 ಜನವರಿ 2018, 12:27 IST
Last Updated 25 ಜನವರಿ 2018, 12:27 IST
ಫೇಸ್‌ಬುಕ್‌ ಪುಟದಲ್ಲಿ ‘ಪದ್ಮಾವತ್‌’ ಚಿತ್ರ ಸೋರಿಕೆ: ಲೈವ್‌ ಸ್ಟ್ರೀಮ್‌ನಲ್ಲಿ ಪೂರ್ಣ ಸಿನಿಮಾ
ಫೇಸ್‌ಬುಕ್‌ ಪುಟದಲ್ಲಿ ‘ಪದ್ಮಾವತ್‌’ ಚಿತ್ರ ಸೋರಿಕೆ: ಲೈವ್‌ ಸ್ಟ್ರೀಮ್‌ನಲ್ಲಿ ಪೂರ್ಣ ಸಿನಿಮಾ   

ಬೆಂಗಳೂರು: ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನ ಪದ್ಮಾವತ್‌ ಚಿತ್ರ ಬಿಡುಗಡೆಯಾದ ದಿನವೇ ಫೇಸ್‌ಬುಕ್‌ ಮೂಲಕ ಲೈವ್‌ ಸ್ಟ್ರೀಮ್‌ ಮೂಲಕ ಇಡೀ ಸಿನಿಮಾ ಸೋರಿಕೆಯಾಗಿದೆ.

ಚಿತ್ರ ಬಿಡುಗಡೆಯನ್ನು ವಿರೋಧಿಸಿ ಉತ್ತರ ಭಾರತದ ಹಲವು ಭಾಗಗಳಲ್ಲಿ ಪ್ರತಿಭಟನೆಯುತ್ತಿದೆ, ಮತ್ತೊಂದು ಕಡೆ ಇಡೀ ಸಿನಿಮಾ ಫೇಸ್‌ಬುಕ್‌ನಲ್ಲೇ ನೋಡುವುದಕ್ಕೆ ಸಿಕ್ಕಿದೆ.

ಜಾತೋಂಕಾ ಅಡ್ಡ(जाटों का अड्डा/Jaaton Ka Adda) ಹೆಸರಿನ ಫೇಸ್‌ಬುಕ್‌ ಪುಟ ಪದ್ಮಾವತ್‌ ಸಿನಿಮಾವನ್ನು ಚಿತ್ರಮಂದಿರದಿಂದ ನೇರವಾಗಿ ಪ್ರದರ್ಶಿಸಿದೆ. ಈ ಲಿಂಕ್‌ ಅನ್ನು 15 ಸಾವಿರಕ್ಕೂ ಹೆಚ್ಚು ಜನರು ಶೇರ್‌ ಮಾಡಿ, 3.5ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿತ್ತು. ಆದರೆ, ಬಳಿಕ ಪುಟದಿಂದ ವಿಡಿಯೋ ತೆಗೆದು ಹಾಕಲಾಗಿದೆ.

ADVERTISEMENT

ಆದರೆ, ‍ಫೇಸ್‌ಬುಕ್‌ ಬಳಕೆದಾರರಲ್ಲಿ ಹಲವು ಮಂದಿ ಲೈವ್‌ಸ್ಟ್ರೀಮ್‌ ವಿಡಿಯೊ ಡೌನ್‌ಲೋಡ್‌ ಮಾಡಿ ಹಂಚಿಕೊಳ್ಳುವುದನ್ನು ಮುಂದುವರಿಸಿದ್ದರು.

ರಾಣಿ ಪದ್ಮಾವತಿ ಮತ್ತು ರಾಜ ರತನ್‌ ಸಿಂಗ್‌ ಭೇಟಿ, ಅವರ ನಡುವಿನ ಪ್ರೇಮಾಂಕರದ ದೃಶ್ಯಗಳಿರುವ ಪ್ರಾರಂಭದ 25 ನಿಮಿಷಕ್ಕೂ ಹೆಚ್ಚು ಅವಧಿಯ ವಿಡಿಯೊಯನ್ನು ಸಾಕಷ್ಟು ಜನ ಹಂಚಿಕೊಂಡಿದ್ದರು. 

‘ಸಿನಿಮಾದಲ್ಲಿ ಯಾವುದೇ ತಪ್ಪು ಕಂಡುಬಂದಿಲ್ಲ...ಹಾಗಾಗಿ ವಿರೋಧ ವ್ಯಕ್ತಪಡಿಸುವುದು ಬೇಡ’ ಎಂದು Jaaton Ka Adda ಫೇಸ್‌ಬುಕ್‌ ಪುಟ ಪ್ರಕಟಿಸಿ ಲೈವ್‌ ವಿಡಿಯೊ ಅಳಿಸಿ ಹಾಕಿದೆ.

</p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.