ADVERTISEMENT

ಸಂಜಯ್ ಲೀಲಾ ಬನ್ಸಾಲಿ ಅಮ್ಮನ ಬಗ್ಗೆ ಸಿನಿಮಾ ಮಾಡುತ್ತೇವೆ ಎಂದು ಘೋಷಿಸಿದ ಕರ್ಣಿ ಸೇನಾ

​ಪ್ರಜಾವಾಣಿ ವಾರ್ತೆ
Published 27 ಜನವರಿ 2018, 4:53 IST
Last Updated 27 ಜನವರಿ 2018, 4:53 IST
ಸಂಜಯ್ ಲೀಲಾ ಬನ್ಸಾಲಿ ಅಮ್ಮನ ಬಗ್ಗೆ ಸಿನಿಮಾ ಮಾಡುತ್ತೇವೆ ಎಂದು ಘೋಷಿಸಿದ ಕರ್ಣಿ ಸೇನಾ
ಸಂಜಯ್ ಲೀಲಾ ಬನ್ಸಾಲಿ ಅಮ್ಮನ ಬಗ್ಗೆ ಸಿನಿಮಾ ಮಾಡುತ್ತೇವೆ ಎಂದು ಘೋಷಿಸಿದ ಕರ್ಣಿ ಸೇನಾ   

ಜೈಪುರ: ವಿರೋಧ, ಪ್ರತಿಭಟನೆಯ ನಡುವೆಯೂ ಸಂಜಯ್ ಲೀಲಾ ಬನ್ಸಾಲಿ ಪದ್ಮಾವತ್ ಚಿತ್ರವನ್ನು ಬಿಡುಗಡೆ ಮಾಡಿದ್ದಕ್ಕಾಗಿ ತಾವು ಬನ್ಸಾಲಿ ಅವರ ಅಮ್ಮನ ಬಗ್ಗೆ ಸಿನಿಮಾ ಮಾಡುತ್ತೇವೆ ಎಂದು ಶ್ರೀ ರಜಪೂತ್  ಕರ್ಣಿ ಸೇನಾ ಘೋಷಿಸಿದೆ.

ಚಿತ್ತೋಡ್‍ಗಢದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಕರ್ಣಿ ಸೇನೆಯ ಜಿಲ್ಲಾ ಅಧ್ಯಕ್ಷ  ಗೋವಿಂದ್ ಸಿಂಗ್ ಖಂಗಾರೋಟ್, ಬನ್ಸಾಲಿ ಅವರ  ಅಮ್ಮನ ಬಗ್ಗೆ ಸಿನಿಮಾ ಮಾಡಲು ನಿರ್ಧರಿಸಿದ್ದೇವೆ, ಅರವಿಂದ್ ವ್ಯಾಸ್ ಅವರು ಈ ಚಿತ್ರವನ್ನು ನಿರ್ದೇಶಿಸಲಿದ್ದು, ಈಗಾಗಲೇ ಚಿತ್ರಕಥೆಯ ಬರವಣೆಗೆ ಶುರು ಮಾಡಿದ್ದೇವೆ.

ಚಿತ್ರಕ್ಕೆ ಲೀಲಾ ಕೀ ಲೀಲಾ ಎಂದು ಹೆಸರಿಟ್ಟಿದ್ದು 15 ದಿನದಲ್ಲಿ ಮುಹೂರ್ತ ನಡೆಯಲಿದೆ. ಮುಂದಿನ ವರ್ಷ ಸಿನಿಮಾ ತೆರೆಗೆ ಬರಲಿದೆ ಎಂದಿದ್ದಾರೆ.
ರಾಜ್ಯಸ್ಥಾನದಲ್ಲಿಯೇ ಈ ಚಿತ್ರದ ಚಿತ್ರೀಕರಣ ನಡೆಯಲಿದೆ.

ADVERTISEMENT

ಬನ್ಸಾಲಿ ಅವರು ನಮ್ಮ ಅಮ್ಮ ಪದ್ಮಾವತಿಯನ್ನು ಅವಮಾನಿಸಿದ್ದಾರೆ. ನಾವು ಈ ಚಿತ್ರ ಮಾಡಿದರೆ ಬನ್ಸಾಲಿ ಈ ಬಗ್ಗೆ ಹೆಮ್ಮೆ ಪಡುತ್ತಾರೆ ಎಂದು ಖಂಗಾರೋಟ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.