ಅಭಿರಾಮಚಂದ್ರ ಟೀಸರ್‌ನಲ್ಲಿ ಮೂಡಿಬಂದಿದ್ದಾನೆ. ನಾಗೇಂದ್ರ ಗಾಣಿಗ ನಿರ್ದೇಶನದ ಈ ಚಿತ್ರದ ಟೀಸರನ್ನು ನಟ ಶಿವರಾಜ್‌ಕುಮಾರ್ ಇತ್ತೀಚೆಗೆ ಬಿಡುಗಡೆ ಮಾಡಿದರು.
ಶಾಲಾ ದಿನಗಳ ಪ್ರೀತಿ, ತುಂಟಾಟ, ಮುಗ್ಧ ಸ್ನೇಹ, ಸುಂದರ ನೋಟ ಎಲ್ಲವೂ ಅಭಿರಾಮಚಂದ್ರ ಟೀಸರ್‌ನಲ್ಲಿದೆ. ರಥ ಕಿರಣ ಸಿದ್ದು ಮೂಲಿಮನಿ, ನಾಟ್ಯರಂಗ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ. ಶಿವಾನಿ ರೈ ಚಿತ್ರದ ನಾಯಕಿ. ಕುಂದಾಪುರ, ಬೆಂಗಳೂರು, ಮೈಸೂರು ಭಾಗಗಳಲ್ಲಿ ಶೂಟಿಂಗ್ ನಡೆಸಲಾಗಿದೆ. ರವಿ ಬಸ್ರೂರು ಸಂಗೀತ ನಿರ್ದೇಶನ ಸಿನಿಮಾಕ್ಕಿದೆ. ರವಿ ಅವರ ಪುತ್ರ ಪವನ್ ಕೂಡ ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ವೀಣಾ ಸುಂದರ್, ಸುಂದರ್ ವೀಣಾ, ಎಸ್.ನಾರಾಯಣ್, ಪ್ರಕಾಶ್ ತೂಮಿನಾಡು ಸೇರಿದಂತೆ ಹಲವು ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ.
ಎ.ಜಿ.ಎಸ್. ಎಂಟರ್‌ಟೇನ್ಮೆಂಟ್ ಹಾಗೂ ರವಿ ಬಸ್ರೂರು ಮ್ಯೂಸಿಕ್ ಮತ್ತು ಮೂವೀಸ್ ಬ್ಯಾನರ್ ಅಡಿ ಎ.ಜಿ.ಸುರೇಶ್ ಹಾಗೂ ಮಲ್ಲೇಶ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಸಂದೀಪ್ ವಲ್ಲೂರಿ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ ಈ ಚಿತ್ರಕ್ಕಿದೆ. ಮೇ ತಿಂಗಳಲ್ಲಿ ಈ ಚಿತ್ರ ತೆರೆಗೆ ಬರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.