ADVERTISEMENT

ಐವೊರ್‌ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಅಲನ್ನಾ ಪಾಂಡೆ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2021, 11:44 IST
Last Updated 6 ನವೆಂಬರ್ 2021, 11:44 IST
ಐವೊರ್‌, ಅಲನ್ನಾ ಪಾಂಡೆ
ಐವೊರ್‌, ಅಲನ್ನಾ ಪಾಂಡೆ   

ಬಾಲಿವುಡ್‌ನ ಮಾದಕ ಚೆಲುವೆ ಅನನ್ಯ ಪಾಂಡೆ ಅವರ ಸಹೋದರಿ ಅಲನ್ನಾ ಪಾಂಡೆ ತನ್ನ ಗೆಳೆಯಐವೊರ್‌ ಮ್ಯಾಕ್‌ಕ್ಯಾರಿಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ರೂಪದರ್ಶಿ, ಜಿರೋ ಸೈಜಿನ ಬೆಡಗಿ ಎಂದೇ ಖ್ಯಾತರಾಗಿರುವ ಅಲನ್ನಾ ಪಾಂಡೆ ಇತ್ತೀಚೆಗೆ ಮಾಲ್ಡೀಸ್‌ ದೇಶಕ್ಕೆ ಪ್ರಯಾಣ ಬೆಳೆಸಿದ್ದರು. ಈ ವೇಳೆ ಐವೊರ್‌ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.

ಮಾಲ್ಡೀವ್ಸ್‌ ಬೀಚ್‌ನಲ್ಲಿ ವಿಭಿನ್ನವಾಗಿ ಅಲನ್ನಾ ಪಾಂಡೆ ಪ್ರೇವ ನಿವೇದನೆ ಮಾಡಿದ್ದಾರೆ. ಇಬ್ಬರು ಪರಸ್ಪರ ಉಂಗುರ ಬದಲಾಯಿಸಿಕೊಂಡಿರುವುದು ಹಾಗೂ ಪರಸ್ಪರ ಚುಂಬಿಸುತ್ತಿರುವ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.

ADVERTISEMENT

ಅಲನ್ನಾ ಪಾಂಡೆ ಅವರಿಗೆ ಶುಭಾಶಯಗಳನ್ನು ಕೋರುತ್ತಿರುವ ಅಭಿಮಾನಿಗಳು ನಿಮ್ಮ ವೈವಾಹಿಕ ಜೀವನ ಸುಂದರವಾಗಿರಲಿ ಎಂದು ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.