ADVERTISEMENT

‘ಅಮ್ಮನ ಲಾಲಿ’ ಹಾಡಿದ ಭವ್ಯ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2024, 0:00 IST
Last Updated 25 ಮಾರ್ಚ್ 2024, 0:00 IST
ಭವ್ಯ
ಭವ್ಯ   

ನಟಿ ಭವ್ಯ ಮುಖ್ಯಭೂಮಿಕೆಯಲ್ಲಿರುವ ‘ಅಮ್ಮನ ಲಾಲಿ’ ಚಿತ್ರ ಇತ್ತೀಚೆಗಷ್ಟೇ ಸೆಟ್ಟೇರಿದೆ. ಹಿರಿಯ ನಟ, ನಿರ್ದೇಶಕ ಎಂ.ಡಿ.ಕೌಶಿಕ್ ಕಾದಂಬರಿ ಆಧಾರಿತ ಈ ಚಿತ್ರಕ್ಕೆ ಆ್ಯಕ್ಷನ್‌–ಕಟ್‌ ಹೇಳುತ್ತಿದ್ದಾರೆ. ಜೊತೆಗೆ ನಿರ್ಮಾಣದ ಹೊಣೆಯನ್ನೂ ಹೊತ್ತುಕೊಂಡಿದ್ದಾರೆ.

‘ಲೇಖಕಿ ಗೀತಾ.ಡಿ.ಎನ್‌ ಬರೆದಿರುವ ಕಥೆಯು ಇವತ್ತಿನ ಕಾಲಘಟ್ಟದಲ್ಲಿ ಕೆಲವೊಂದು ಮನೆಯಲ್ಲಿ ನಡೆಯುವ ಘಟನಾವಳಿಗಳು, ತಾಯಿ ಮಗಳ ನಡುವಿನ ಆರೋಗ್ಯಕರ ವಾಗ್ವಾದಗಳು, ಸಮಸ್ಯೆಗಳನ್ನು ಹೊಂದಿದೆ. ಇವತ್ತಿನ ಕಾಲಘಟ್ಟಕ್ಕೆ ಹೇಳಲೇ ಬೇಕಾದ ಕಥೆಯಿದು’ ಎಂದರು ನಿರ್ದೇಶಕ ಎಂ.ಡಿ.ಕೌಶಿಕ್.
ಚಿತ್ರದಲ್ಲಿ ಭವ್ಯ ಅವರ ಪತಿಯಾಗಿ ಯತಿರಾಜ್ ಕಾಣಿಸಿಕೊಂಡಿದ್ದಾರೆ.  ಪದ್ಮ, ರೂಪಾ, ಶರತ್‌ ಮುಂತಾದವರು ನಟಿಸುತ್ತಿದ್ದಾರೆ. 

ರವಿ.ಇ.ದತ್ತಾತ್ರೇಯ ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದು, ಪಿ.ವಿ.ಆರ್.ಸ್ವಾಮಿ ಛಾಯಾಚಿತ್ರಗ್ರಹಣವಿದೆ. ಬೆಂಗಳೂರು, ಲಾಸ್‌ಏಂಜಲಿಸ್, ಕ್ಯಾಲಿಫೋರ್ನಿಯಾದಲ್ಲಿ ಚಿತ್ರೀಕರಣ ನಡೆಸಲು ತಂಡ ನಿರ್ಧರಿಸಿದೆ. 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.