ADVERTISEMENT

ಅನನ್ಯಾ ಪಾಂಡೆ ಮಸ್ತ್ ಡಾನ್ಸ್

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2020, 14:23 IST
Last Updated 5 ಫೆಬ್ರುವರಿ 2020, 14:23 IST
ಅನನ್ಯಾ ಪಾಂಡೆ
ಅನನ್ಯಾ ಪಾಂಡೆ   

‘ಸ್ಟೂಡೆಂಟ್ ಆಫ್ ದಿ ಇಯರ್ 2’ ಚಿತ್ರದ ಬೆಡಗಿ ಅನನ್ಯಾ ಪಾಂಡೆ ಡಾನ್ಸ್ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಸಂಗೀತ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅನನ್ಯಾಸಾರಾ ಅಲಿ ಖಾನ್ ನಟನೆಯ ‘ಸಿಂಬಾ’ ಚಿತ್ರದ ‘ಆಂಕ್ ಮಾರೆ’ ಹಾಡಿಗೆ ಹೆಜ್ಜೆ ಹಾಕಿರುವ ವಿಡಿಯೊ ಅದು. ಈ ಡಾನ್ಸ್ ವಿಡಿಯೊವನ್ನು ಅನನ್ಯಾ ಅಭಿಮಾನಿಗಳು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ.

ಈ ಕಾರ್ಯಕ್ರಮದಲ್ಲಿ ಬಣ್ಣದ ಲೆಹಂಗಾ ಧರಿಸಿದ್ದ ಅನನ್ಯಾ ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದರು. ಜೊತೆಗೆ ತಮ್ಮ ಸಾಂಪ್ರದಾಯಿಕ ಉಡುಪಿನ ಚಿತ್ರವನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲೂ ಹಂಚಿಕೊಂಡಿದ್ದರು.

ತಮ್ಮ ಚೊಚ್ಚಲ ಚಿತ್ರದಿಂದಲೇ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಈಕೆ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಕ್ರಿಯಾಶೀಲರಾಗಿರುತ್ತಾರೆ. ಆ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಾರೆ.ಅಭಿಮಾನಿಗಳ ನೆಚ್ಚಿನ ‘ಸ್ಟಾರ್ ಕಿಡ್‌’ ಎನ್ನಿಸಿಕೊಂಡಿರುವ ಈ ಚೆಲುವೆಯನ್ನು ನೋಡಲು ಅಭಿಮಾನಿಗಳು ಕಾಯುತ್ತಿರುತ್ತಾರೆ.

ADVERTISEMENT

ಕಾರ್ತಿಕ್ ಆರ್ಯನ್‌, ಭೂಮಿ ಪಡ್ನೇಕರ್ ಜೊತೆ ‘ಪತಿ ಪತ್ನಿ ಔರ್ ವೋ’ ಚಿತ್ರದಲ್ಲೂ ಅನನ್ಯಾ ನಟಿಸಿದ್ದರು. ಈ ಚಿತ್ರದಲ್ಲಿ ಆಕೆಯ ನಟನೆಗೆ ಅಭಿಮಾನಿಗಳು ಫಿದಾ ಆಗಿರುವುದು ಸುಳ್ಳಲ್ಲ.

ಅನನ್ಯಾ ಸದ್ಯಕ್ಕೆ ‘ಖಾಲಿ ಪೀಲಿ’ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇಷ್ಟೇ ಅಲ್ಲದೇ ದೀಪಿಕಾ ಪಡುಕೋಣೆ ಹಾಗೂ ಸಿದ್ಧಾಂತ್ ಚತುರ್ವೇದಿ ಅಭಿನಯದ ಚಿತ್ರದಲ್ಲೂ ಅನನ್ಯಾ ನಟಿಸಲಿದ್ದಾರೆ ಎಂಬ ಸುದ್ದಿಯೂ ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿದ್ದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.