ಸ್ಟಾರ್ಟ್‌ಅಪ್ ಉದ್ಯಮಿ ಹಾಗೂ ಯುವ ರಾಜಕಾರಣಿ ಅನಿಲ್ ಶೆಟ್ಟಿ ನಾಯಕ ನಟನಾಗಿ ಚಲನಚಿತ್ರರಂಗಕ್ಕೆ ಹೆಜ್ಜೆ ಇಡಲು ಸಜ್ಜಾಗಿದ್ದಾರೆ.
ಜನ್ಮದಿನದ ಸಂದರ್ಭದಲ್ಲಿ ಅನಿಲ್ ತಮ್ಮ ಈ ನಿರ್ಧಾರವನ್ನು ಪ್ರಕಟಿಸಿದ್ದು, ಚಿತ್ರರಂಗಕ್ಕೆ ಸೇರುವ ತಮ್ಮ ಬಹಳ ದಿನಗಳ ಕನಸನ್ನು ನನಸು ಮಾಡಲು ಮುಂದಾಗಿದ್ದಾರೆ. ವಾಣಿಜ್ಯೋದ್ಯಮದಲ್ಲಿ ಹಲವಾರು ಯಶಸ್ವಿ ಯೋಜನೆಗಳನ್ನು ರೂಪಿಸಿರುವ ಅನಿಲ್ ಶೆಟ್ಟಿ ಈಗ ಚಿತ್ರೋದ್ಯಮದಲ್ಲೂ ತಮ್ಮ ಛಾಪು ಮೂಡಿಸಲು ಮುಂದಾಗಿದ್ದಾರೆ. ತಮ್ಮ ಮೊದಲ ಚಿತ್ರದಲ್ಲೇ ಅನಿಲ್ ನಟನಾಗಿ ಮಾತ್ರವಲ್ಲದೆ ಬರಹಗಾರರಾಗಿಯೂ ಗುರುತಿಸಿಕೊಳ್ಳುತ್ತಿರುವುದು ವಿಶೇಷ. ಕ್ರಿಕೆಟಿಗ ಕೆ.ಎಲ್.ರಾಹುಲ್ ಮತ್ತು ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರೊಂದಿಗೆ ‘ಡ್ರಿಪ್ ಪ್ರಾಜೆಕ್ಟ್’ ಮತ್ತು ‘ಮೆಟಮನ್’ ಎನ್ನುವ ಎರಡು ಫ್ಯಾಷನ್ ಬ್ರಾಂಡ್‌ಗಳನ್ನು ಸ್ಥಾಪಿಸಿರುವ ಇವರು ಅನೇಕ ಸ್ಟಾರ್ಟ್‌ಅಪ್ ಕಂಪನಿಗಳಿಗೆ ಬಂಡವಾಳ ಹೂಡಿದ್ದಾರೆ.
ಅನಿಲ್ ಶೆಟ್ಟಿ ನಟನೆಯ ಚಿತ್ರದ ಶೀರ್ಷಿಕೆ ಮತ್ತು ತಂಡದ ವಿವರಗಳು ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ. ಚಲನಚಿತ್ರರಂಗದ ಖ್ಯಾತ ಕಲಾವಿದರ ಜೊತೆ ಅನಿಲ್ ಕೆಲಸ ಮಾಡಲು ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.