ADVERTISEMENT

‘ಅನುಷ್ಕ’ಳ ಫ್ಯಾಂಟಸಿ ಲೋಕ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2018, 13:34 IST
Last Updated 22 ಅಕ್ಟೋಬರ್ 2018, 13:34 IST
ಅಮೃತಾ ಅಯ್ಯಂಗಾರ್
ಅಮೃತಾ ಅಯ್ಯಂಗಾರ್   

ಧರ್ಮದುರ್ಗ ಸಾಮ್ರಾಜ್ಯದ ರಾಣಿ ಅನುಷ್ಕಳ ಸುತ್ತ ಕಥೆ ಹೆಣೆದಿರುವ ‘ಅನುಷ್ಕ’ ಚಿತ್ರದ ಶೂಟಿಂಗ್‌ ಮುಕ್ತಾಯವಾಗಿದೆ. ಥ್ರಿಲ್ಲರ್ ಫ್ಯಾಂಟಸಿ ಚಿತ್ರ ಇದು. ಕನ್ನಡ, ತೆಲುಗು ಮತ್ತು ತಮಿಳು ಭಾಷೆಯಲ್ಲೂ ಈ ಸಿನಿಮಾ ನಿರ್ಮಾಣವಾಗುತ್ತಿದೆ. ತೆಲುಗಿನಲ್ಲಿ ‘ದೇವಿ ಅನುಷ್ಕ’ ಎಂದು ಹೆಸರಿಡಲಾಗಿದೆ.

ನಟಿ ಅಮೃತಾ ಅಯ್ಯಂಗಾರ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದೇವಿ ಅನುಷ್ಕ ಮತ್ತು ಮಾರ್ಡನ್‌ ಹುಡುಗಿಯಾಗಿ ಅವರು ಬಣ್ಣಹಚ್ಚಿದ್ದಾರೆ.ಶ್ರೀನಂಜುಂಡೇಶ್ವರ ಪ್ರೊಡಕ್ಷನ್ ಹೌಸ್ ಲಾಂಛನದಡಿ ಎಸ್.ಕೆ. ಗಂಗಾಧರ್‌ ಬಂಡವಾಳ ಹೂಡಿದ್ದಾರೆ.

ರವೀಂದ್ರ ಮುದ್ದಿ ಬರೆದಿರುವ ‘ಇವಳೇ ನೋಡು ನಮ್ಮ ತಾಯಿ’ ಹಾಡಿನ ಚಿತ್ರೀಕರಣ ಆದಿಚುಂಚನಗಿರಿ ಮಠದಲ್ಲಿ ನಡೆದಿದೆ. ಅಮೃತಾ ಈ ಹಾಡಿನ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದರು. ಈ ಹಾಡಿನ ಚಿತ್ರೀಕರಣದೊಂದಿಗೆ ಸಿನಿಮಾದ ಶೂಟಿಂಗ್‌ ಕೂಡ ಪೂರ್ಣಗೊಂಡಿದೆ.

ADVERTISEMENT

ಬೆಂಗಳೂರು, ಮೈಸೂರು, ಅರಸೀಕೆರೆ ಹಾಗೂ ಬ್ಯಾಂಕಾಕ್‌ನಲ್ಲಿ ಶೂಟಿಂಗ್‌ ನಡೆಸಲಾಗಿದೆ. ‘ಡೇಂಜರ್ ಜೋನ್’ ಹಾಗೂ ‘ನಿಶ್ಯಬ್ದ 2’ ಚಿತ್ರ ನಿರ್ದೇಶಿಸಿದ್ದ ದೇವರಾಜ್‌ಕುಮಾರ್‌ ಇದನ್ನು ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆಯ ಜವಾಬ್ದಾರಿಯನ್ನೂ ಅವರೇ ಹೊತ್ತಿದ್ದಾರೆ.

ವೀನಸ್ ಮೂರ್ತಿ ಅವರ ಛಾಯಾಗ್ರಹಣವಿದೆ. ವಿಕ್ರಂ ಸೆಲ್ವ ಸಂಗೀತ ಸಂಯೋಜಿಸಿದ್ದಾರೆ. ಶ್ರೀಧರ್ ಅವರ ಸಂಕಲನವಿದೆ. ಅಶೋಕ್, ಸಿದ್ದರಾಜು, ನರಸಿಂಹ, ಚಂದ್ರು ಸಾಹಸ ನಿರ್ದೇಶನ ಮಾಡಿದ್ದಾರೆ.

ರೂ‍ಪೇಶ್‌ ಶೆಟ್ಟಿ ಈ ಚಿತ್ರದ ನಾಯಕ. ನೆಗೆಟಿವ್‌ ಶೇಡ್‌ ಇರುವ ಪಾತ್ರದಲ್ಲಿ ಅವರು ನಟಿಸಿದ್ದಾರೆ. ಉಳಿದಂತೆ ಸಾಧುಕೋಕಿಲ, ರೂಪ ಶರ್ಮ, ಬಾಲರಾಜ್, ಆದಿಲೋಕೇಶ್ ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.