
ಬೆಂಗಳೂರು: 17ನೇ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಗುರುವಾರ(ಜ.29) ಚಾಲನೆ ಸಿಕ್ಕಿದ್ದು, ಇಂದಿನಿಂದ(ಜ.30) ಸಿನಿಮಾಗಳ ಪ್ರದರ್ಶನ ನಡೆಯಲಿದೆ.
ನೆದರ್ಲೆಂಡ್ಸ್‌ನ ‘ಪೋರ್ಟ್ ಬ್ಯಾಗೇಜ್’ ಪ್ರದರ್ಶನದ ಮೂಲಕ ಚಿತ್ರೋತ್ಸವ ಆರಂಭವಾಗಿದ್ದು, ಇದರ ಮರುಪ್ರದರ್ಶನ ಲುಲು ಮಾಲ್‌ನ ಸಿನಿಪೊಲಿಸ್‍ನ ಐದನೇ ಪರದೆಯಲ್ಲಿ ಜ.30ರ ಮಧ್ಯಾಹ್ನ 3.10ಕ್ಕೆ ನಡೆಯಲಿದೆ. ರಾಜಾಜಿನಗರದ ಲುಲು ಮಾಲ್‌ನ 11 ಪರದೆಗಳಲ್ಲಿ ಬೆಳಗ್ಗೆ 10ರಿಂದ, ಚಾಮರಾಜಪೇಟೆಯ ಕಲಾವಿದರ ಸಂಘ, ಸುಚಿತ್ರ ಫಿಲ್ಮ್ ಸೊಸೈಟಿಯಲ್ಲಿ ಬೆಳಿಗ್ಗೆ 11ರಿಂದ ಸಿನಿಮಾಗಳ ಪ್ರದರ್ಶನ ನಡೆಯಲಿದೆ.
ಲುಲು ಮಾಲ್‍ನ ಮುಖ್ಯ ದ್ವಾರದ ಬಳಿಯ ಬಯಲಿನಲ್ಲಿ ಟೆಂಟ್ ಸಿನಿಮಾ ಮಾದರಿಯಲ್ಲಿ ರಾತ್ರಿ 7ಕ್ಕೆ ರಾಜ್‌ಕುಮಾರ್ ಅವರು ಅಭಿನಯಿಸಿದ ‘ಬಂಗಾರದ ಮನುಷ್ಯ’ ಚಿತ್ರವು ಪ್ರದರ್ಶನವಾಗಲಿದೆ. 4ಕೆ(ಉತ್ಕೃಷ್ಟ ಗುಣಮಟ್ಟದ)ಯಲ್ಲಿರುವ ‘ಭಕ್ತ ಕನಕದಾಸ’, ‘ಉಯ್ಯಾಲೆ’, ‘ಸಂಧ್ಯಾರಾಗ’, ‘ಶಂಕರ್‌ಗುರು’ ಹಾಗೂ ‘ಜೀವನಚೈತ್ರ’ ಸಿನಿಮಾಗಳು ಚಿತ್ರೋತ್ಸವದಲ್ಲಿ ಪ್ರದರ್ಶನವಾಗಲಿದೆ. ಒಟ್ಟಾರೆ, ಸಿನಿಪೊಲಿಸ್ ಮಲ್ಟಿಪ್ಲೆಕ್ಸ್‌ನಲ್ಲಿ ಮೊದಲ ದಿನವೇ 40ಕ್ಕೂ ಹೆಚ್ಚು ಚಿತ್ರಗಳು ಪ್ರದರ್ಶನವಾಗಲಿವೆ. ಹೆಚ್ಚಿನ ಮಾಹಿತಿಗಾಗಿ https://www.biffes.org/ಗೆ ಭೇಟಿ ನೀಡಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.