ADVERTISEMENT

ಬಾಯ್ಕಾಟ್ ನಡುವೆ ಬ್ರಹ್ಮಾಸ್ತ್ರದ ಮೊದಲ ದಿನದ ಬಾಕ್ಸ್‌ ಆಫೀಸ್ ಗಳಿಕೆ ಎಷ್ಟು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಸೆಪ್ಟೆಂಬರ್ 2022, 12:30 IST
Last Updated 10 ಸೆಪ್ಟೆಂಬರ್ 2022, 12:30 IST
ಬ್ರಹ್ಮಾಸ್ತ್ರ
ಬ್ರಹ್ಮಾಸ್ತ್ರ   

ಬೆಂಗಳೂರು: ನಿನ್ನೆ ಸೆ.9 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವ, ಅಯಾನ್ ಮುಖರ್ಜಿ ನಿರ್ದೇಶನದರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ನಟನೆಯ ‘ಬ್ರಹ್ಮಾಸ್ತ್ರ’ (Brahmastra Part One: Shiva)ಸಿನಿಮಾಬಹಿಷ್ಕಾರ ನಡುವೆಯೂಉತ್ತಮ ಗಳಿಕೆಯತ್ತ ಮುನ್ನುಗ್ಗುತ್ತಿದೆ.

ಮೂಲಗಳ ಪ್ರಕಾರಬ್ರಹ್ಮಾಸ್ತ್ರ ಮೊದಲ ದಿನ ಎಲ್ಲ ಭಾಷೆಗಳಲ್ಲಿಯೂ ಸೇರಿ ₹75ಕೋಟಿಗೂ ಹೆಚ್ಚುಗಳಿಕೆ ಕಂಡಿದೆಎಂದು ತಿಳಿದು ಬಂದಿದೆ. ಚಿತ್ರದ ನಟ ರಣಬೀರ್ ಕಪೂರ್ ಅವರ ಹಿಂದೂ ವಿರೋಧಿ ಹೇಳಿಕೆಯಿಂದ ಬಹಿಷ್ಕಾರಕ್ಕೆಗುರಿಯಾಗಿತ್ತು.

ಆದರೆ, ಚಿತ್ರದ ಬಾಕ್ಸಾ ಆಫೀಸ್ ಗಳಿಕೆ ಚಿತ್ರತಂಡಕ್ಕೆ ಸಂತಸ ನೀಡಿಲ್ಲ ಎಂಬ ಅಭಿಪ್ರಾಯವನ್ನು ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಪಡಿಸಿದ್ದಾರೆ. ₹400 ಕೋಟಿಗೂ ಅಧಿಕ ವೆಚ್ಚದಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ.

ADVERTISEMENT

ಹಿಂದೂ ಪುರಾಣಗಳಲ್ಲಿ ಬರುವ ಅಸ್ತ್ರಗಳ ಬಗೆಗಿನ ಒಂದು ಕಾಮಿಕ್ ಆಧಾರಿತ 3ಡಿ ಚಿತ್ರ ಇದಾಗಿದೆ.2018ರಲ್ಲಿ ಬ್ರಹ್ಮಾಸ್ತ್ರ ಚಿತ್ರದ ಶೂಟಿಂಗ್ ಆರಂಭವಾಗಿದ್ದು, 2022ರಲ್ಲಿ ಮುಕ್ತಾಯವಾಯಿತು. ಐದು ವರ್ಷಗಳ ಕಾಲ ಈ ಸಿನಿಮಾದ ಶೂಟಿಂಗ್‌ ನಡೆದಿದೆ. ಇದು ಮೊದಲ ಭಾಗ ಎಂದು ಚಿತ್ರತಂಡ ಹೇಳಿದೆ.

ಫ್ಯಾಂಟಸಿ ಸಿನಿಮಾವಾದಬ್ರಹ್ಮಾಸ್ತ್ರದ ಇಂದು ‘ಕೇಸರಿಯಾ’ ವಿಡಿಯೊ ಹಾಡು ಬಿಡುಗಡೆಯಾಗಿದ್ದು ಟ್ರೆಂಡ್ ಕೂಡಆಗಿದೆ.

ಕೇಸರಿಯಾ ಹಾಡನ್ನು ಅರ್ಜಿತ್ ಸಿಂಗ್ ಅವರು ಹಾಡಿದ್ದು, ಗಮನ ಸೆಳೆದಿದೆ. ಚಿತ್ರಕ್ಕೆ ಪ್ರೀತಮ್ ಅವರ ಸಂಗೀತವಿದೆ.ಪ್ರೀತಿ, ಬೆಳಕು, ಬೆಂಕಿ ಚಿತ್ರದ ಹೈಲೆಟ್‌ ಎಂದು ಚಿತ್ರತಂಡ ಹೇಳಿಕೊಂಡಿದೆ.

ಬ್ರಹ್ಮಾಸ್ತ್ರ, ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲಿ ಬಿಡುಗಡೆಯಾಗಲಿದ್ದು, ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ಸಂಸ್ಥೆ ಮೂಲಕ ನಿರ್ಮಾಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.