ADVERTISEMENT

ಮನದ ಹೊಸಿಲು ಬಿಡುಗಡೆ ಮಾಡಿದ ‘ಚೇಸ್‌’

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2021, 13:45 IST
Last Updated 15 ಏಪ್ರಿಲ್ 2021, 13:45 IST
‘ಚೇಸ್‌’ ಚಿತ್ರದ ಪೋಸ್ಟರ್‌
‘ಚೇಸ್‌’ ಚಿತ್ರದ ಪೋಸ್ಟರ್‌   

ಕಳೆದ ವರ್ಷ ಸೆಟ್ಟೇರಿದ ಚಿತ್ರ ‘ಚೇಸ್‌’ನ ನಿರ್ಮಾಣ ಬಹುತೇಕ ಪೂರ್ಣಗೊಂಡಿದೆ. ಈ ನಡುವೆ ಚಿತ್ರದ ‘ಮನದ ಹೊಸಿಲ...’ ಎಂಬ ಲಿರಿಕಲ್‌ ಹಾಡಿನ ವಿಡಿಯೊಬಿಡುಗಡೆಯಾಗಿದೆ.

ವಿಜಯ್ ಪ್ರಕಾಶ್ ಹಾಗೂ ಮೊಹಮ್ಮದ್ ಮಕ್ಬುಲ್ ಮನ್ಸೂರ್ ಈ ಹಾಡಿನ ಗಾಯಕರು. ಕಾರ್ತಿಕ್ ಆಚಾರ್ಯ ಸಂಗೀತ ಸಂಯೋಜಿಸಿದ್ದಾರೆ. ವೈದ್ಯ ಉಮೇಶ್ ಪಿಲಿಕುಡೆಲು ಸಾಹಿತ್ಯ ಬರೆದಿದ್ದಾರೆ. ಉಮೇಶ್‌ ಅವರು ಕನ್ನಡ, ತುಳು ಭಾಷೆಯ ಹಲವಾರು ಚಿತ್ರಗಳಿಗೆ ಹಾಡುಗಳ ಸಾಹಿತ್ಯ ಬರೆದು ಗಮನಸೆಳೆದವರು. ವಿಲೋಕ್‌ ಶೆಟ್ಟಿ ಚಿತ್ರದ ನಿರ್ದೇಶಕರು. ರಾಧಿಕಾ ನಾರಾಯಣ್, ಅವಿನಾಶ್ ನರಸಿಂಹರಾಜು, ಶೀತಲ್ ಶೆಟ್ಟಿ, ಅರ್ಜುನ್ ಯೋಗಿ, ಶ್ವೇತಾ ಸಂಜೀವುಲು, ಸುಶಾಂತ್ ಪೂಜಾರಿ,ಪ್ರಮೋದ್ ಶೆಟ್ಟಿ, ಅರವಿಂದ್ ರಾವ್, ಸುಧಾ ಬೆಳವಾಡಿ ತಾರಾಗಣದಲ್ಲಿದ್ದಾರೆ. ಇದು ಕ್ರೈಂ, ಥ್ರಿಲ್ಲರ್ ಚಿತ್ರ ಎಂದಿದ್ದಾರೆ ವಿಲೋಕ್‌ ಶೆಟ್ಟಿ. ಸಿಂಪ್ಲಿ ಫನ್ ಮೀಡಿಯಾ ನೆಟ್ವರ್ಕ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗಿದೆ. ಮನೋಹರ್ ಸುವರ್ಣ, ಪ್ರದೀಪ್ ಶೆಟ್ಟಿ, ಪ್ರಶಾಂತ್ ಶೆಟ್ಟಿ ನಿರ್ಮಾಪಕರು. ಶಿವ್ ಶೆಟ್ಟಿ ಕಾರ್ಯಕಾರಿ ನಿರ್ಮಾಪಕರು.
ಮಂಗಳೂರು, ಬೆಂಗಳೂರು, ಕೊಚ್ಚಿಯಲ್ಲಿ ಚೇಸ್ ಸಿನಿಮಾ ಚಿತ್ರೀಕರಣಗೊಂಡಿದೆ. ಮೇ ವೇಳೆಗೆ ಬಿಡುಗಡೆಗೆ ಸಿದ್ಧತೆ ಮಾಡಿಕೊಂಡಿದೆ ಚಿತ್ರತಂಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT