ADVERTISEMENT

‘ಛಾಯ’ದಲ್ಲಿ ಹಾರರ್‌ ಛಾಯೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2019, 19:30 IST
Last Updated 18 ನವೆಂಬರ್ 2019, 19:30 IST
ಛಾಯ ಸಿನಿಮಾದ ಆಡಿಯೊ ಬಿಡುಗಡೆ
ಛಾಯ ಸಿನಿಮಾದ ಆಡಿಯೊ ಬಿಡುಗಡೆ   

ಹಾರಾರ್ ಅಂಶಗಳ ಛಾಯೆ ಇರುವ ‘ಛಾಯ’ ಸಿನಿಮಾದ ಆಡಿಯೊ ಬಿಡುಗಡೆಯಾಗಿದೆ.ನಾಲ್ವರುಹುಡುಗರು ಒಂದು ಮನೆಗೆ ಬಂದಾಗ ಅಲ್ಲಿ ನಡೆಯುವ ವಿಚಿತ್ರ ಘಟನೆಗಳೇ ಈ ಚಿತ್ರದ ಕಥಾವಸ್ತು.

20 ವರ್ಷಗಳಿಂದ ಕೊರಿಯೋಗ್ರಾಫರ್ ಆಗಿ ಕೆಲಸ ಮಾಡಿರುವ ಜಗ್ಗು ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಇದು ಅವರಿಗೆ ಚೊಚ್ಚಲ ನಿರ್ದೇಶನದ ಸಿನಿಮಾ.

ಸಿರಿ ಮ್ಯೂಜಿಕ್ ಆಡಿಯೊ ಕಂಪನಿ ಮೂಲಕ ಹೊರತಂದಿರುವ ಆಡಿಯೊವನ್ನು ಚಿತ್ರದ ನಿರ್ಮಾಪಕ ಮಧುಗೌಡ್ರು ಬಿಡುಗಡೆ ಮಾಡಿದರು.ಹಿರಿಯ ಸಿವಿಲ್ ನ್ಯಾಯಾಧೀಶ ವಿ.ಸೋಮಶೇಖರ್ ಹಾಗೂ ಸಿರಿ ಮ್ಯೂಸಿಕ್ ಕಂಪನಿಯ ಮಾಲೀಕ ಸುರೇಶ್ ಚಿಕ್ಕಣ್ಣ ಚಿತ್ರತಂಡ ಹರಸಿದರು.

ADVERTISEMENT

ಚಿತ್ರದ ಹಾಡುಗಳಿಗೆ ಮಂಜುಕವಿ ಸಾಹಿತ್ಯ ರಚಿಸಿ, ಸಂಗೀತ ಸಂಯೋಜಿಸಿದ್ದಾರೆ. ಈಗಾಗಲೇ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮುಗಿದಿದ್ದು, ಹಾಡುಗಳು ಹಾಗೂ ಸಾಹಸ ದೃಶ್ಯಗಳ ಚಿತ್ರೀಕರಣ ಮಾತ್ರವೇ ಬಾಕಿ ಇದೆ.

‘ಈ ಚಿತ್ರದಿಂದ ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡಬೇಕೆನ್ನುವುದು ನಮ್ಮ ಉದ್ದೇಶ. ಚಿತ್ರಕ್ಕೆ ಅಗತ್ಯವಿರುವುದನ್ನೆಲ್ಲ ಒದಗಿಸಿದ್ದೇವೆ. ಚಿತ್ರ ಚೆನ್ನಾಗಿ ಮೂಡಿಬಂದಿದೆ. ನಿರ್ದೇಶಕ ಜಗ್ಗು ಒಳ್ಳೆಯ ಪ್ರಯತ್ನ ಮಾಡಿದ್ದಾರೆ. ಮುಂದೆಬಾಹುಬಲಿ ರೀತಿಯ ಸಿನಿಮಾ ಮಾಡುವ ಆಲೋಚನೆ ಇದೆ’ ಎಂದುನಿರ್ಮಾಪಕ ಮಧುಗೌಡ್ರು ತಮ್ಮ ಆಸೆ ಬಿಚ್ಚಿಟ್ಟರು.

ನಾಯಕನಾಗಿ ನಟಿಸಿರುವಆನಂದ್, ‘ಅತ್ಯಾಚಾರ ಸಮಾಜಕ್ಕೆ ದೊಡ್ಡ ಪಿಡುಗು. ಅತ್ಯಾಚಾರಿಗಳನ್ನು ಹೇಗೆ ಶಿಕ್ಷಿಸಬಹುದೆನ್ನುವ ಕಥೆ ಈಚಿತ್ರದಲ್ಲಿದೆ. ಚಿತ್ರದಲ್ಲಿ ನನ್ನದು ಸಾಫ್ಟವೇರ್‌ ಎಂಜಿನಿಯರ್‌ ಪಾತ್ರ. ಪುನೀತ್ ರಾಜ್ ಕುಮಾರ್ ರೀತಿ ನಾನು ಕಾಣಿಸಿಕೊಳ್ಳುತ್ತಿರುವುದಕ್ಕೆ ಹೆಮ್ಮೆ ಇದೆ’ ಎಂದರು.

ನಾಯಕಿ ತೇಜುರಾಜ್, ‘ಇದು ನನ್ನ ಮೊದಲ ಸಿನಿಮಾ. ನಾಯಕನ ಪತ್ನಿಯಪಾತ್ರ ನನ್ನದು’ ಎಂದು ಚುಟುಕಾಗಿ ಪಾತ್ರ ಪರಿಚಯಿಸಿಕೊಂಡರು.

ನಟ ರಾಜ್ ಉದಯ್ ಖಳನಟನಾಗಿ ಕಾಣಿಸಿಕೊಂಡಿದ್ದಾರೆ.ತಾರಾಗಣದಲ್ಲಿ ಹೇಮಂತ್, ನಂದನ್, ದರ್ಶನ್, ರಾಜಶೇಖರ್, ರಾಜು, ಉದಯ್, ಅನನ್ಯ, ಲಕ್ಷ್ಮಿ, ಗೋವಿಂದಪ್ಪ, ರಾಜ್‍ಪ್ರಭು, ನಯನ ಕೃಷ್ಣ, ಕಿಲ್ಲರ್ ವೆಂಕಟೇಶ್, ರೋಹಿಣಿ ಇದ್ದಾರೆ.

ಛಾಯಾಗ್ರಹಣ ಅರುಣ್ ವೀರೂರ್, ಸಂಕಲನ ದುರ್ಗಾ ಪಿ.ಎಸ್., ಸಾಹಸ ಅಪ್ಪುವೆಂಕಟೇಶ್, ಯಾರಿಶ್ ಜಾನಿ ಅವರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.