ADVERTISEMENT

ಸಿನಿ ಸುದ್ದಿ | ಹೊಸಬರ ‘ಉದಯ ಸೂರ್ಯ’ 

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2025, 1:29 IST
Last Updated 5 ಏಪ್ರಿಲ್ 2025, 1:29 IST
ತ್ರಿವೇಣಿ
ತ್ರಿವೇಣಿ   

ಬಹುತೇಕ ಹೊಸಬರಿಂದ ಕೂಡಿರುವ ‘ಉದಯ ಸೂರ್ಯ’ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಎಸ್.ಎಸ್.ಪ್ರಕಾಶ್ ರಾಜ್ ಕಥೆ ಬರೆದು, ನಿರ್ದೇಶಿಸಿದ್ದಾರೆ.

‘ಪ್ರೀತಿಯಲ್ಲಿ ಮೋಸ ಹೋದ ಇಬ್ಬರು ಸ್ನೇಹಿತರ ಕಥೆಯಿದು. ಸತ್ಯ ಘಟನೆಯನ್ನು ಆಧರಿಸಿ ಕಥೆ ಸಿದ್ಧಪಡಿಸಿದ್ದೇವೆ. ಹಳ್ಳಿ ಸೊಗಡಿನ ಕನ್ನಡ ಭಾಷೆಯನ್ನು ಬಳಸಲಾಗಿದೆ. ಏಪ್ರಿಲ್ ಮೂರನೇ ವಾರದಲ್ಲಿ ಚಿತ್ರ ತೆರೆ ಕಾಣುತ್ತಿದೆ’ ಎಂದರು ನಿರ್ದೇಶಕರು.

ಶ್ರೀ ಸಿದ್ದೇಶ್ವರ ಫಿಲ್ಮ್ಸ್‌ ಚಿತ್ರವನ್ನು ನಿರ್ಮಿಸಿದೆ. ನಿರ್ದೇಶಕರೇ ಚಿತ್ರದ ನಾಯಕ. ತ್ರಿವೇಣಿ ನಾಯಕಿ. ಏಳು ಹಾಡುಗಳಿದ್ದು, ಯಶವಂತ ಭೂಪತಿ ಸಂಗೀತವಿದೆ. ಸಾಮ್ರಾಟ್ ನಾಗರಾಜ್ ಛಾಯಾಚಿತ್ರಗ್ರಹಣ, ಮಲ್ಲಿ ಸಂಕಲನವಿದೆ. ಶಿವಮೊಗ್ಗ, ನ್ಯಾಮತಿ, ಹೊನ್ನಾಳಿ, ಹಂಚಿನಸಿದ್ದಾಪುರ ಮುಂತಾದೆಡೆ ಚಿತ್ರೀಕರಣಗೊಂಡಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.