ADVERTISEMENT

ಡ್ಯಾನ್ಸರ್‌ ನೋರಾ ನೋಡೋಣ ಬಾರಾ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2019, 20:00 IST
Last Updated 25 ಫೆಬ್ರುವರಿ 2019, 20:00 IST
ನೋರಾ ಫತೇಹಿ
ನೋರಾ ಫತೇಹಿ   

‘ಒಂದು ವರ್ಷದಿಂದ ಡ್ಯಾನ್ಸ್‌ ಕಲೀತಾ ಇದ್ದೀನಿ. ಒಂದು ಸ್ಟೇಜ್‌ ಶೋದಲ್ಲಿ ಹೆಜ್ಜೆ ಹಾಕಲು ಬೇಕಾಗುವುದಕ್ಕಿಂತ 50 ಪಟ್ಟು ಹೆಚ್ಚಿನ ಶ್ರಮ ಬೇಡುವ ಡ್ಯಾನ್ಸ್ ಮಾಡಲು ಸಿದ್ಧಳಾಗಿದ್ದೇನೆ.ಈಗ ವಿಶ್ವಾಸ ಬಂದಿದೆ’ ಎಂದು ಹೇಳಿದ್ದಾರೆ, ಸಪೂರ ಸುಂದರಿ ನೋರಾ ಫತೇಹಿ.

‘ಸ್ಟ್ರೀಟ್‌ ಡ್ಯಾನ್ಸರ್‌’ಗಾಗಿ ನೋರಾ ಹಿಪ್‌ ಹಾಪ್, ಆಫ್ರೊ, ಬೆಲ್ಲಿ ಡಾನ್ಸ್‌ನಂತಹ ಸಮಕಾಲೀನ ನೃತ್ಯ ಪ್ರಕಾರಗಳನ್ನು ಅಭ್ಯಾಸ ಮಾಡಿದ್ದಾರೆ.

ಕಳೆದ ವರ್ಷ ಹಿಟ್‌ ಚಿತ್ರಗಳಲ್ಲಿ ನಟಿಸಿ ಫುಲ್‌ ಖುಷ್‌ ಆಗಿರುವ ನೋರಾ, ಡಾನ್ಸ್‌ ಚಿತ್ರ ‘ಸ್ಟ್ರೀಟ್‌ ಡ್ಯಾನ್ಸರ್‌ 3ಡಿ’ನಲ್ಲಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ರೆಮೊ ಡಿಸೋಜಾ ನಿರ್ದೇಶನದ ಈ ಚಿತ್ರ, ನೃತ್ಯ ಮತ್ತು ಸಂಗೀತದಲ್ಲಿನ ಭೂತೊ ನ ಭವಿಷ್ಯತಿ ಎಂಬಂತೆ ಮೂಡಿಬರಬೇಕು ಎಂಬುದು ರೆಮೊ ಲೆಕ್ಕಾಚಾರ. ಶ್ರದ್ಧಾ ಕಪೂರ್ ಮತ್ತು ವರುಣ್‌ ಧವನ್‌ ಜೋಡಿಯೊಂದಿಗೆ ‘ಡ್ಯಾನ್ಸಿಂಗ್ ಸ್ಟಾರ್’ ಪ್ರಭುದೇವ ಕೂಡಾ ಮುಖ್ಯ ಪಾತ್ರಗಳನ್ನು ಮಾಡುತ್ತಿದ್ದಾರೆ. ಲಂಡನ್‌ನಲ್ಲಿ ಎರಡನೇ ಹಂತದ ಚಿತ್ರೀಕರಣ ಭರದಿಂದ ಸಾಗಿದೆ. ಚಿತ್ರ ತಂಡದ ಜೊತೆ ನೋರಾ ಕೂಡಾ ಲಂಡನ್‌ ಬೀದಿಗಳಲ್ಲಿ ಹಾಡಿ ಕುಣಿಯಲಿದ್ದಾರೆ.

ADVERTISEMENT

ಸಲ್ಮಾನ್‌ ಖಾನ್‌ – ಕತ್ರಿನಾ ಕೈಫ್‌ ಜೋಡಿಯ ಭಾರತ್‌ ಚಿತ್ರದಲ್ಲಿ ನಟಿಸುತ್ತಿರುವ ನೋರಾ, ‘ಬಾತ್ಲಾ ಹೌಸ್‌’ನಲ್ಲಿಯೂ ಮುಖ್ಯ ಪಾತ್ರ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.