ADVERTISEMENT

ಕುತೂಹಲದ ‘ದೇವಿ 2’

​ಪ್ರಜಾವಾಣಿ ವಾರ್ತೆ
Published 19 ಮೇ 2019, 10:47 IST
Last Updated 19 ಮೇ 2019, 10:47 IST
‘ದೇವಿ 2’ ಸಿನಿಮಾದ ಪೋಸ್ಟರ್
‘ದೇವಿ 2’ ಸಿನಿಮಾದ ಪೋಸ್ಟರ್   

ತಮನ್ನಾ ಭಾಟಿಯಾ, ಪ್ರಭುದೇವ ಅಭಿನಯದ ಕಾಮಿಡಿ ಹಾರರ್ ಸಿನಿಮಾ ‘ದೇವಿ’ ಕಾಲಿವುಡ್‌ನಲ್ಲಿ ಯಶಸ್ಸು ಗಳಿಸಿತ್ತು. ರೂಪದರ್ಶಿ ರೂಬಿ ಪಾತ್ರ ಹಾಗೂ ಸಾಂಪ್ರದಾಯಿಕ ಚೆಲುವೆ ಹೀಗೆ ಎರಡಲ್ಲೂ ತಮನ್ನಾ ಪ್ರೇಕ್ಷಕರ ಗಮನ ಸೆಳೆದಿದ್ದರು. ಬಾಕ್ಸಾಫೀಸಿನಲ್ಲೂ ಈ ಸಿನಿಮಾ ಹಿಟ್ ಆಗಿತ್ತು. ಇದೀಗ‘ದೇವಿ 2’ ಸಿನಿಮಾ ಬರಲಿದ್ದು, ಈಚೆಗಷ್ಟೇ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ.

ಏಪ್ರಿಲ್‌ನಲ್ಲೇ ತೆರೆಗೆ ಬರಬೇಕಿದ್ದ ‘ದೇವಿ 2’ ಸಿನಿಮಾ ಟ್ರೇಲರ್ ಆನ್‌ಲೈನ್‌ನಲ್ಲಿ ವೀಕ್ಷಕರ ಗಮನ ಸೆಳೆಯುತ್ತಿದೆ. ಟ್ರೇಲರ್‌ಗೂ ಮುನ್ನ ‘ಲವ್’ ಮಿ ಅನ್ನುವ ಹಾಡು ಕೂಡಾ ಬಿಡುಗಡೆ ಕಂಡಿತ್ತು. ‘ವಿಕ್ರಮ್ ವೇದ’ ಸಿನಿಮಾಕ್ಕೆ ಹಾಡು ಬರೆದು ಮತ್ತು ಸಂಗೀತ ನಿರ್ದೇಶಿಸಿದ್ದ ಮಾಧನ್ ಕರ್ಕೆ, ಈ ಹಾಡು ಬರೆದಿದ್ದಾರೆ.

‘ದೇವಿ 2’ ಮೂಲಕಥೆಯನ್ನೇ ಹೊಂದಿದ್ದು, ಈ ಬಾರಿ ತಮನ್ನಾ ಬದಲಿಗೆ ಪ್ರಭುದೇವ ದೆವ್ವದ ಪಾತ್ರದಲ್ಲಿ ನಟಿಸುತ್ತಿರುವುದು ವಿಶೇಷ. ಈ ಸಿನಿಮಾದಲ್ಲಿ ಪ್ರಭುದೇವ ಎರಡು ದೆವ್ವಗಳನ್ನು ಆವಾಹಿಸಿಕೊಂಡಿದ್ದಾರೆ. ಹಳ್ಳಿಯ ಸಂಪ್ರದಾಯಸ್ಥೆ ಪಾತ್ರದಲ್ಲಿ ಗ್ಲಾಮರ್‌ರಹಿತ ಪಾತ್ರದಲ್ಲಿ ತಮನ್ನಾ ನಟಿಸಿದ್ದಾರೆ. ಟ್ರೇಲರ್‌ನ ವಿಚಿತ್ರ ಸಂಭಾಷಣೆ, ಹಾಸ್ಯ ದೃಶ್ಯಾವಳಿಗಳು ಸಿನಿಮಾದ ಹೂರಣವನ್ನು ತೆರೆದಿಡುವಂತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.