ADVERTISEMENT

ನಿರ್ದೇಶಕ ಸಾವನ್‌ ಕುಮಾರ್‌ ಟಾಕ್‌ ನಿಧನ

ಪಿಟಿಐ
Published 25 ಆಗಸ್ಟ್ 2022, 21:50 IST
Last Updated 25 ಆಗಸ್ಟ್ 2022, 21:50 IST

ಮುಂಬೈ: ಹಿಂದಿ ಚಲನಚಿತ್ರ ರಂಗದ ನಿರ್ದೇಶಕ ಸಾವನ್‌ ಕುಮಾರ್‌ ಟಾಕ್‌ ಅವರು, ಗುರುವಾರ ಇಲ್ಲಿನ ಕೋಕಿಲಾಬೆನ್‌ ಧೀರೂಭಾಯ್‌ ಅಂಬಾನಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಸಾವನ್‌ ಅವರ ಸೋದರಳಿಯ ನವೀನ್‌ ತಿಳಿಸಿದ್ದಾರೆ.

ಬುಧವಾರ ಆರೋಗ್ಯ ಹದಗೆಟ್ಟಿದ್ದರಿಂದ ಸಾವನ್‌ ಅವ
ರನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಶ್ವಾಸಕೋಶ ಸೋಂಕು ಹಾಗೂ ಉಸಿರಾಟ ಸಂಬಂಧಿತ ಸಮಸ್ಯೆಗಳಿಗೆ ಚಿಕಿತ್ಸೆಯನ್ನೂ ನೀಡಲಾಗಿತ್ತು.

‘ಸಾವನ್‌ ಅವರು ಗುರುವಾರ ಮುಂಜಾನೆ 4:15ಕ್ಕೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ’ ಎಂದು ನವೀನ್‌ ಮಾಹಿತಿ ನೀಡಿದ್ದಾರೆ.

ADVERTISEMENT

1972ರಲ್ಲಿ ‘ಗೋಮ್ತಿ ಕೆ ಕಿನಾರೆ’ ಚಿತ್ರದ ಮೂಲಕ ನಿರ್ದೇಶನಕ್ಕೆ ಕಾಲಿಟ್ಟ ಸಾವನ್‌ ಅವರು, ‘ಸೌತೇನ್‌ (1983)’, ‘ಸನಮ್‌ ಬೇವಫಾ (1991)’, ‘ಚಾಂದ್‌ ಕಾ ತುಕಡಾ (1994)’, ‘ಸಾವನ್‌... ದಿ ಲವ್‌ ಸೀಸನ್‌ (2003)’ ಸೇರಿ ಹಲವು ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ಸಾವನ್‌ ಅವರು ಚಿತ್ರ ಸಾಹಿತಿಯೂ ಆಗಿದ್ದರು. ‘ಪ್ಯಾರ್‌ ಕಿ ಕಶ್ತಿ ಮೆ’, ‘ಜಾನೇಮನ್‌ ಜಾನೇಮನ್’ ಹಾಗೂ ‘ಚಾಂದ್‌ ಸಿತಾರೆ’ (ಕಹೊ ನಾ ಪ್ಯಾರ್‌ ಹೈ ಚಿತ್ರದ) ಹಾಡುಗಳನ್ನೂ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.