ಮುಂಬೈ: ಮಾದಕ ನೋಟ, ಮನಮೋಹಕ ಉಡುಪಿನ ಮೂಲಕ ಗಮನ ಸೆಳೆಯುವ ಬಾಲಿವುಡ್ ನಟಿ ದಿಶಾ ಪಟಾನಿ ಈ ಬಾರಿಯು ಯುವ ಹೃದಯಗಳಿಗ ಕಿಚ್ಚು ಹಾಕಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಅವರು ಇತ್ತೀಚೆಗೆ ಪೋಸ್ಟ್ ಮಾಡಿರುವ ಹಾಟ್ ಚಿತ್ರವೊಂದು ಬಳಕೆದಾರರ ಹೃದಯ ಗೆದ್ದಿದೆ. ಗುಲಾಬಿ ಬಣ್ಣದ ಲಿಲಾಕ್ ಮತ್ತು ನೆಕ್ಲೆಸ್ ತೊಟ್ಟು ಅವರು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.
ಟೈಗರ್ ಶ್ರಾಫ್ ಅವರ ಹೀರೊಪಂತಿ-2 ಚಿತ್ರದ ವಿಶೇಷ ಪ್ರದರ್ಶನಕ್ಕೆ ತೆರಳಿದ್ದ ದಿಶಾ, ಅಲ್ಲಿ ಈ ರೀತಿ ಕಾಣಿಸಿಕೊಂಡಿದ್ದಾರೆ.
ಚಿತ್ರದಲ್ಲಿ ತಾರಾ ಸುತಾರಾಯ್, ನಮಾಜುದ್ದೀನ್ ಸಿದ್ಧಿಕಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ದಿಶಾ ಅವರ ಈ ಚಿತ್ರವನ್ನು ಇನ್ಸ್ಟಾಗ್ರಾಮ್ನಲ್ಲಿ ಹಲವರು ಮೆಚ್ಚಿಕೊಂಡಿದ್ದು, ಹೂ, ಬಟರ್ ಫ್ಲೈ, ಎಮೋಜಿಗಳನ್ನು ಹರಿಬಿಟ್ಟಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.