ADVERTISEMENT

ಕನ್ನಡಕ್ಕೆ ಪರಭಾಷೆ ಚಿತ್ರಗಳ ಡಬ್ಬಿಂಗ್‌ ಬೆಂಬಲಿಸಿ ಟ್ವಿಟರ್‌ನಲ್ಲಿ ಅಭಿಯಾನ

 #dubbingBeku #NammaHakku 

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2018, 12:12 IST
Last Updated 5 ಸೆಪ್ಟೆಂಬರ್ 2018, 12:12 IST
   

ಬೆಂಗಳೂರು:ಕನ್ನಡಕ್ಕೆ ಪರಭಾಷೆ ಚಿತ್ರಗಳ ಡಬ್ಬಿಂಗ್‌ಗೆ ವಿರೋಧ ಇರುವಂತೆಯೇ,ಎಲ್ಲ ಭಾಷೆಯ ಚಿತ್ರಗಳನ್ನುಕನ್ನಡದಲ್ಲಿಯೇ ನೋಡಬೇಕೆಂದು ಬಯಸುವವರ ಸಂಖ್ಯೆಯೂ ದೊಡ್ಡದಿದೆ. ಡಬ್ಬಿಂಗ್‌ ಪರ ನಿಲುವು ಹೊಂದಿರುವವರು ಇಂದು ಸಂಜೆ ಟ್ವಿಟರ್‌ನಲ್ಲಿ ’ಡಬ್ಬಿಂಗ್‌ ಬೇಕು’ ಮತ್ತು ’ನಮ್ಮ ಹಕ್ಕು’ ಹ್ಯಾಷ್‌ ಟ್ಯಾಗ್‌ ಅಭಿಯಾನಆಯೋಜಿಸಿದ್ದಾರೆ.

ಕನ್ನಡಕ್ಕೆ ಡಬ್ ಆದ ಪರಭಾಷೆಯ ಚಿತ್ರವನ್ನು ನೋಡಬೇಕೆ ಬೇಡವೇ ಎನ್ನುವುದನ್ನು ನಿರ್ಧರಿಸಬೇಕಾದ ಹಕ್ಕು ಸಾಮಾನ್ಯ ಕನ್ನಡಿಗನದ್ದು. ಡಬ್ಬಿಂಗ್ ತಡೆಯಲು ಪ್ರಯತ್ನ ಪಡುತ್ತಿರುವವರ ಜೊತೆಗೆ ಕೈಜೋಡಿಸದಂತೆ ಸರ್ಕಾರವನ್ನುಎಚ್ಚರಿಸಲುಸಂಜೆ 6:30ಕ್ಕೆ #dubbingBeku #NammaHakkuಅಭಿಯಾನಆಯೊಜಿಸಲಾಗಿದೆ.

ಈಗಾಗಲೇ ಡಬ್ಬಿಂಗ್ ಚಿತ್ರ ಬಿಡುಗಡೆ ಕಾನೂನಿನ ಪ್ರಕಾರ ಸರಿ ಎಂಬುದನ್ನುಕರ್ನಾಟಕಹೈಕೋರ್ಟ್‌, ಸಿಸಿಐ ಮತ್ತು ಸುಪ್ರೀಂ ಕೋರ್ಟ್‌ತೀರ್ಪಿನಲ್ಲಿಹೇಳುವ ಮೂಲಕ ಸಾಮಾನ್ಯ ಕನ್ನಡಿಗರ ಹಕ್ಕನ್ನು ಎತ್ತಿಹಿಡಿದಿವೆ. ಇದೀಗಕಾನೂನಿನ ಪ್ರಕಾರವೇ ಪರಭಾಷೆಯ ಚಿತ್ರವೊಂದು ಕನ್ನಡಕ್ಕೆ ಡಬ್ ಆಗಿ ಬಿಡುಗಡೆಯಾಗಿದೆ. ಕೋರ್ಟ್‌ಗಳಲ್ಲಿಡಬ್ಬಿಂಗ್ ವಿರೋಧಿಗಳಿಗೆ ಛೀಮಾರಿ ಹಾಕಿ, ದಂಡ ವಿಧಿಸಲಾಗಿದೆ.ಆದರೂ, ಡಬ್ಬಿಂಗ್ ವಿರೋಧಿಗಳು ಈ ಚಿತ್ರದ ಮೇಲೆಸಮರ ಸಾರಿದ್ದಾರೆ.

ADVERTISEMENT

ಸಚಿವೆ ಡಾ.ಜಯಮಾಲಾ ಅವರು ರಾಜ್ಯ ಸರ್ಕಾರ ಡಬ್ಬಿಂಗ್‌ಗೆ ವಿರೋಧವಾಗಿದೆ ಎಂದು ನೀಡಿರುವ ಹೇಳಿಕೆಗೆ ವಿರೋಧ ವ್ಯಕ್ತವಾಗಿದೆ. ಸರ್ಕಾರ ಸಾಮಾನ್ಯ ಕನ್ನಡಿಗನ ಹಕ್ಕಿನ ವಿರುದ್ಧ ಹೆಜ್ಜೆ ಇಡಲು ಹೊರಟಿದೆಯೇ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಶ್ನಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.